ಕಾರ್ಮಿಕರ ಕೈಗೆ ನರೇಗಾ ಕೆಲಸ!

  • In State
  • April 4, 2020
  • 459 Views
 ಕಾರ್ಮಿಕರ ಕೈಗೆ ನರೇಗಾ ಕೆಲಸ!

ಚಿತ್ರದುರ್ಗ, ಏ.4 : ಕೊರೊನಾ ವೈರಸ್ ಸೋಂಕಿನ ಭೀತಿ, ಉರಿಯುವ ಬಿಸಿಲು, ಹಬ್ಬದ ಸಡಗರ ಎಲ್ಲವನ್ನೂ ಮರೆತು ಚಿತ್ರದುರ್ಗ ಜಿಲ್ಲೆಯ ಲಕ್ಷಾಂತರ ಕೂಲಿ ಕಾರ್ಮಿಕರು ನರೇಗಾದಡಿ ಕೆಲಸ ನಿರ್ವಹಿಸಿ, ಅಚ್ಚರಿ ಮೂಡಿಸಿದ್ದಾರೆ.

ಜಿಪಂ ನೀಡಿರುವ ಅಂಕಿ ಅಂಶಗಳ ಪ್ರಕಾರ ಮಾ.19 ರಿಂದ ಮಾ.31 ರವರೆಗೆ ಬರೋಬ್ಬರಿ 2,45 ಲಕ್ಷ ಮಾನವ ದಿನಗಳನ್ನು ಉದ್ಯೋಗ ಖಾತ್ರಿಯಡಿ ಸೃಜಿಸಲಾಗಿದೆ. ಪ್ರತಿ ವರ್ಷ ಹಣಕಾಸು ವರ್ಷದ ಅಂತ್ಯದಲ್ಲಿ ಈ ರೀತಿಯ ಮಾಂತ್ರಿಕ ಶೈಲಿಯಲ್ಲಿ ಮಾನವ ದಿನಗಳು ಸೃಜನೆಯಾಗುವುದು ಹೊಸದಲ್ಲವಾದರೂ, ಲಾಕ್‌ಡೌನ್‌, ಕೊರೊನಾ ಸೋಂಕಿನ ಭೀತಿಯ ನಡುವೆಯೂ ಲಕ್ಷಾಂತರ ಜನ ಕೂಲಿ ಮಾಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆನ್ನುವ ಸರಕಾರದ ಕಾಳಜಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬೇನಾಮಿ ಗುತ್ತಿಗೆದಾರರು ವೈಯಕ್ತಿಕ ಫಲಾನುಭವಿಗಳನ್ನು ಪುಸಲಾಯಿಸಿ, ಎನ್‌ಎಂಆರ್‌ ತೆಗೆದು ಮಾನವ ದಿನಗಳ ಸೃಜನೆ ಎನ್ನುವ ಬೋಗಸ್‌ ಲೆಕ್ಕ ತೋರಿಸುತ್ತಿದ್ದಾರೆ ಎಂಬುದು ಗ್ರಾಮೀಣ ಕೂಲಿ ಕಾರ್ಮಿಕರ ಆರೋಪವಾಗಿದೆ.

 

Related