ಕಳಪೆ ಮಟ್ಟದಲ್ಲಿ ಕಾಮಗಾರಿ

  • In State
  • February 12, 2020
  • 428 Views
ಕಳಪೆ ಮಟ್ಟದಲ್ಲಿ ಕಾಮಗಾರಿ

ಧಾರವಾಡ, ಫೆ. 12: ಸರ್ಕಾರದ ಅಧಿಸೂಚನೆಯ ಪ್ರಕಾರ ಘೋಷಿತ ಕೊಳಚೆ ಪ್ರದೇಶವಾದ ಹುಬ್ಬಳ್ಳಿಯ ಗಿರಣಿಚಾಳದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ , ಧಾರವಾಡದಲ್ಲಿ ನಿರ್ಮಿಸುತ್ತಿರುವ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ ಮನೆಗಳು ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಹಾಗೂ ಸದರಿ ಮನೆಗಳ ಕಳಪೆ ಮಟ್ಟದಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ಮಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಆದಷ್ಟು ಬೇಗ ಪ್ರತಿ ತಿಂಗಳ ಬಾಡಿಗೆ ಹಣ ರೂಪಾಯಿ 5000 / – ಗಳಂತೆ ಕೊಡಬೇಕು, ಮನೆಯನ್ನು ಅತೀ ಶೀಘ್ರವಾಗಿ ಕಟ್ಟಿಸಿ ಕೊಡಬೇಕು, ವಿಳಂಬವಾದರೆ ನಾವು ಎಲ್ಲಾ ಫಲಾನುಭವಿಗಳು ನಿರ್ಣಯ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜೆ.ಸಿ ಕಮಲದಿನ್ನಿ, ಕೃಷ್ಣ ದಾಸಬಾಳ, ಜಾಕೀರ್ ಕುಲಾಲ್ ಸೇರಿದಂತೆ ನೂರಾರು ಕೊಳಗೇರಿ ನಿವಾಸಿಗಳು ಭಾಗವಹಿಸಿದ್ದರು.

Related