ಮಹಿಳೆಯರಿಗೆ ಎಲ್ಲ ರಂಗದಲ್ಲಿ ಒಳ್ಳೆ ಸ್ಥಾನ ಸಿಗಬೇಕು: ಕೆ. ರತ್ನಪ್ರಭಾ

ಮಹಿಳೆಯರಿಗೆ ಎಲ್ಲ ರಂಗದಲ್ಲಿ ಒಳ್ಳೆ ಸ್ಥಾನ ಸಿಗಬೇಕು: ಕೆ. ರತ್ನಪ್ರಭಾ

ಬೆಂಗಳೂರು: ನಗರದ ಏಫ್‌ಕೆಸಿಸಿಐ ನ ಶ್ರೀ ಎಂ.ವಿ. ಸಭಾಂಗಣದಲ್ಲಿ ನಡೆದ ಮಹಿಳಾ ಮುಂದಾಳತ್ವದ ಉದ್ಯಮಶೀಲ️ತೆ ಮತ್ತು ಸಬಲೀಕರಣ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ಒಕ್ಕೂಟದ ಸಂಸ್ಥಾಪಕಿ ಕೆ. ರತ್ನಪ್ರಭಾ ಮಾಧ್ಯಮದವರೊಂದಿಗೆ ಮಾತನಾಡಿ, ಮಹಿಳೆಯರಿಗೆ ಸರಿಯಾದ ರೀತಿ ಸಹಕಾರ ನೀಡಿದರೆ ಅವರು ಒಳ್ಳೆಯ ಸ್ಥಾನದಲ್ಲಿ ನಿಂತುಕೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು.

ಮಹಿಳೆಯರು ಎಲ್ಲ ರಂಗದಲ್ಲಿ ಒಳ್ಳೆ ಸ್ಥಾನವನ್ನು ಪಡೆಯಬೇಕೆಂದರೆ ಸರ್ಕಾರ ಮಹಿಳಾ ಉದ್ಯಮಿದಾರರಿಗೆ  ಎಲ್ಲ ರೀತಿಯ ಸೌಲತ್ತನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಸಮರ್ಪಕವಾಗಿ ತರಬೇತಿ ಮತ್ತು ಮಾರ್ಕೆಟಿಂಗ್ ಇನ್ನಿತರ ತರಬೇತಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರಿಂದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಹ  ಮುಂದುವರೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು

ಈ ಕಾರ್ಯಕ್ರಮಕ್ಕೆ ರಾಜ್ಯದ ಹಲವಾರು ಜಿಲ್ಲೆಗಳಿಂದ ಮಹಿಳಾ ಉದ್ಯಮಿದಾರರು ಭಾಗವಹಿಸಿದ್ದರು. ಮಹಿಳಾ ಉದ್ಯಮಿದಾರರು ಉನ್ನತ ಮಟ್ಟಕ್ಕೆರಲು ಯಾವೆಲ್ಲ ರೀತಿಯ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಈ ಕಾರ್ಯಕ್ರಮದಲ್ಲಿ ನಾವು ಚರ್ಚಿಸಿದ್ದೇವೆ ಎಂದು ತಿಳಿಸಿದರು.

ಈ ಸಂದರಭದಲ್ಲಿ ಸಂಧ್ಯಾ ಪುರೇಚಾ, ಅಧ್ಯಕ್ಷೆ, ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ, ಯೋಜನಾ ಇಲಾಖೆ ಮತ್ತು ಇತರೆ ಔದ್ಯಮಿಗಳು ಉದ್ಘಾಟಿಸಿದರು.

Related