ಮಹಿಳೆ ಶವ ಪತ್ತೆ; ಕೊಲೆ ಶಂಕೆ

ಮಹಿಳೆ ಶವ ಪತ್ತೆ; ಕೊಲೆ ಶಂಕೆ

ಚಿಂಚೋಳಿ : ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪೋಲಕಪಳ್ಳಿಯ ವಿದ್ಯುತ್ ತಯಾರಿಕಾ ಘಟಕದ ಸಮೀಪ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಮಹಿಳೆಯನ್ನು ಅಪರಿಚಿತರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸುಮಾರು 30 ವರ್ಷ ವಯಸ್ಸಿನ ಇವರಿಗೆ ಮದುವೆ ಆಗಿದೆಯೋ ಇಲ್ಲವೋ ತಿಳಿದುಬಂದಿಲ್ಲ. ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದಾರೆ. ಮೃತಳ ಬಾಯಿಗೆ ಬಟ್ಟೆ ತುರುಕಿದ್ದು ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಆದರೆ ಈಗಲೇ ಏನನ್ನು ಹೇಳಲಾಗದು ಬೇರೆ ಕಡೆ ಕೊಲೆ ಮಾಡಿ ಇಲ್ಲಿ ಬಿಸಾಕಿರಬಹುದು. ಸ್ಥಳದಲ್ಲಿ ಮಹಿಳೆಯ ಕರವಸ್ತ್ರ ಹಾಗೂ ಪರ್ಸ್ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಪಿಐ ಮಹಾಂತೇಶ ಪಾಟೀಲ, ಸಬ್ ಇನ್‌ಸ್ಪೆಕ್ಟರ್ ಸಂತೋಷ ರಾಠೋಡ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸಿದರು.

ನಂತರ ಸುದ್ದಿ ತಿಳಿದು ನೂರಾರು ಜನ ಸ್ಥಳಕ್ಕೆ ದೌಡಾಯಿಸಿದ್ದರಿಂದ ಅಲ್ಲಿ ಜನಜಂಗುಳಿ ಉಂಟಾಯಿತು.

Related