ಜನ್ಮ ದಿನದಂದೇ ಗಂಡು ಮಗುವಿನ ತಂದೆಯಾದ ಒಡೆಯರ್

ಜನ್ಮ ದಿನದಂದೇ ಗಂಡು ಮಗುವಿನ ತಂದೆಯಾದ ಒಡೆಯರ್

ಬೆಂಗಳೂರು : ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ದಂಪತಿಗೆ ಗಂಡು ಮಗುವಿನ ಜನನವಾಗಿದೆ.

ವಿಶೇಷ ಅಂದ್ರೆ ಇಂದು ಪವನ್ ಒಡೆಯರ್ ಅವರ ಹುಟ್ಟುಹಬ್ಬವಾಗಿದೆ. ಹೀಗಾಗಿ ಇಂದೇ ಮಗನ ಜನನ ಕೂಡ ಆಗಿರುವುದು ಕುಟುಂಬದ ಸಂತಸ ಮತ್ತಷ್ಟು ಹೆಚ್ಚಿಸಿದೆ. ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿರುವ ಫೋಟೋವನ್ನು ಪವನ್ ತಮ್ಮ ಇನ್ಸ್ಟಾ, ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಅಲ್ಲದೆ ನನ್ನ ಜನ್ಮದಿನದಂದೇ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದ್ದು, ಗಂಡು ಮಗುವಿನ ಜನನವಾಗಿದೆ. ಜೈ ಚಾಮುಂಡೇಶ್ವರಿ ಎಂದು ಬರೆದುಕೊಂಡಿದ್ದಾರೆ.

Related