ಮತ್ತೆ ಒಂದಾಗ್ತಾರಾ ಸಮಂತಾ, ನಾಗಚೈತನ್ಯ?

ಮತ್ತೆ ಒಂದಾಗ್ತಾರಾ ಸಮಂತಾ, ನಾಗಚೈತನ್ಯ?

ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದು ಈಗಾಗಲೇ ವರ್ಷಗಳೇ ಕಳೆದು ಹೋಗಿದೆ. ಮತ್ತೆ ಇವರಿಬ್ಬರು ಒಂದಾಗುತ್ತಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅರೆ… ಇದೇನಪ್ಪಾ ವಿಚ್ಛೇದನ ವಾದಮೇಲೆ ಮತ್ತೆ ನಾಗಚೈತನ್ಯ ಮತ್ತು ಸುಮಂತ ಒಂದಾಗ್ತಾರೆ ಅಂತ ಅನ್ಕೊಂಡ್ರಾ?…

ಸಮಂತಾ ಈಗ ತಾನೆ ತಮ್ಮ ಚಿಕಿತ್ಸೆಯನ್ನು ಮುಗಿಸಿ ಸುಧಾರಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳಿಂದ ಸಮಂತ ಅವರು ಸಿನಿಮಾ ರಂಗದಿಂದ ದೂರ ಇದ್ದಾರೆ.

ಇನ್ನು ಧೂತ ಹೆಸರಿನ ವೆಬ್ ಸರಣಿ ಸಮಂತಾ ಹಾಗೂ ನಾಗಚೈತನ್ಯ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ನಾಗಚೈತನ್ಯ ಹೀರೋ. ಮೊದಲ ಭಾಗ ಹಿಟ್ ಆಗಿದೆ. ಎರಡನೇ ಭಾಗದಲ್ಲಿ ಸಮಂತಾ ಕೂಡ ಇರಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.

‘ಧೂತ’ ವೆಬ್ ಸರಣಿಗೆ ವಿಕ್ರಮ್ ಇದರ ನಿರ್ದೇಶಕರಾಗಿದ್ದರು. ಮೊದಲ ಭಾಗ ಜನರಿಂದ ಮೆಚ್ಚುಗೆ ಪಡೆದಿತ್ತು. ಹೀಗಾಗಿಯೇ 2ನೇ ಭಾಗಕ್ಕೆ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕ ವಿಕ್ರಮ್. ಇದರಲ್ಲಿ ಸಮಂತಾ ನಟಿಸಬೇಕು ಎನ್ನುವುದು ಇವರ ಉದ್ದೇಶ.

Related