ತಮಿಳುನಾಡಿಗೆ ನೀರು ಕೊಡುವುದಿಲ್ಲ : ಸಿಎಂ

ತಮಿಳುನಾಡಿಗೆ ನೀರು ಕೊಡುವುದಿಲ್ಲ : ಸಿಎಂ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀಡು ಬಿಡುಗಡೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಳ್ಳಿಹಾಕಿದ್ದು, ಕರ್ನಾಟಕಕ್ಕೇ ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಹೆಗ್ಗವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ, ಬಿಜೆಪಿ ಆರೋಪ ನಿರಾಧಾರ. ಕೇಂದ್ರದ ನಿರ್ದೇಶನ ಅಥವಾ ತಮಿಳುನಾಡು ನಮಗೆ ನೀರು ಕೊಡುವಂತೆ ಮನವಿ ಮಾಡಿದರೂ ನಾವು ನೀರು ಕೊಡುವುದಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಜಾರಿಗೆ ಅಧಿಸೂಚನೆ ಹೊರಡಿಸಿದೆ. ಧಾರ್ಮಿಕ ಆಧಾರದ ಮೇಲೆ ಪೌರತ್ವ ನೀಡುವುದನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಹೇಳಿದರು.

Related