ಅನುಷ್ಕಾ ಜತೆ ಕಾಡು ಸುತ್ತಿದ ಕೊಹ್ಲಿ

ಅನುಷ್ಕಾ ಜತೆ ಕಾಡು ಸುತ್ತಿದ ಕೊಹ್ಲಿ

ಆಕ್ಲೆಂಡ್, ಫೆ. 14 : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಕೂಡಾ ಜತೆಯಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಸೋಲು ಮರೆತು ಟೆಸ್ಟ್ ಸರಣಿಗೆ ಸಿದ್ಧರಾಗುವ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಟ್ರಕ್ಕಿಂಗ್ ಮಾಡಿ ರಿಲ್ಯಾಕ್ಸ್ ಮಾಡಿದ್ದಾರೆ.
ಅನುಷ್ಕಾ, ವಿರಾಟ್, ಕ್ರಿಕೆಟಿಗರು ಟ್ರಕ್ಕಿಂಗ್ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಫೆ. 21 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಮುನ್ನ ಸಿಕ್ಕು ಕಿರು ಅವಧಿಯ ಬಿಡುವಿನ ವೇಳೆಯನ್ನು ಕ್ರಿಕೆಟಿಗರು ಚೆನ್ನಾಗಿಯೇ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

Related