ಶ್ರೀಲೀಲಾ ಚಿತ್ರೀಕರಣದಿಂದ ದೂರ ಉಳಿದಿದ್ಯಾಕೆ?

  • In Cinema
  • December 21, 2023
  • 70 Views
ಶ್ರೀಲೀಲಾ ಚಿತ್ರೀಕರಣದಿಂದ ದೂರ ಉಳಿದಿದ್ಯಾಕೆ?

ಕನ್ನಡದ ಬೆಡಗಿ ನಟಿ ಶ್ರೀ ಲೀಲಾ ಈಗ ಮೋಸ್ಟ್ ವಾಂಟೆಡ್ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡ ಚಿತ್ರ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿ ಅತಿ ಬೇಡಿಕೆಯುಳ್ಳ ನಟಿಯಾಗಿರುವ ಶ್ರೀ ಲೀಲಾ ಸದ್ಯ ಕೆಲವು ದಿನಗಳ ತಾತ್ಕಾಲಿಕ ಯಾವ ಚಿತ್ರೀಕರಣದಲ್ಲೂ ಭಾಗಿಯಾಗುತ್ತಿಲ್ಲ.

ಹೌದು, ನಟಿ ಶ್ರೀ ಲೀಲಾ ಎಂಬಿಬಿಎಸ್ ಓದುತ್ತಿದ್ದು ಈ ಬಾರಿ ಅಂತಿಮ ವರ್ಷ ವಾಗಿದ್ದು, ಅಂತಿಮ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದರಿಂದ ಕೆಲವು ದಿನಗಳವರೆಗೆ ಯಾವುದೇ ಚಿತ್ರೀಕರಣದಲ್ಲಿ ಭಾಗಿಯಾಗುವುದಿಲ್ಲವೆಂದು ಹೇಳಿದ್ದಾರೆ.

ಪರೀಕ್ಷೆ ಮುಗಿಯುವವರೆಗೂ ಶ್ರೀಲೀಲಾ ಯಾವುದೇ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದಿಲ್ಲ. ಪರೀಕ್ಷೆ ಮುಗಿದ ನಂತರ ಶ್ರೀಲೀಲಾ ಗುಂಟೂರು ಕರಂ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.

ನಟಿ ಸದ್ಯ ಹತ್ತು ಸಿನಿಮಾಗಳಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಲೀಲಾ ಧಮಾಕಾ ಹಿಟ್‌ನೊಂದಿಗೆ ಫಾರ್ಮ್‌ಗೆ ಬಂದರು. ತೆಲುಗಿನಲ್ಲಿ ಮೋಸ್ಟ್ ವಾಂಟೆಡ್ ನಾಯಕಿಯಾದರು.

 

Related