ಶಿಲ್ಪಾ ಶೆಟ್ಟಿ ಮೋದಿಗೆ ಧನ್ಯವಾದ ಹೇಳಿದ್ಯಾಕೆ?

ಶಿಲ್ಪಾ ಶೆಟ್ಟಿ ಮೋದಿಗೆ ಧನ್ಯವಾದ ಹೇಳಿದ್ಯಾಕೆ?

ಮುಂಬೈ: ಅಯೋಧ್ಯೆಯಲ್ಲಿ ಜನವರಿ 22ನೇ ತಾರೀಕಿನಂದು ಗ್ರಾಮ ಮಂದಿರ ಉದ್ಘಾಟನೆ ಆಗಿರುವುದರಿಂದ ದೇಶದಲ್ಲಿರುವ ಸಾವಿರಾರು ರಾಮನ ಭಕ್ತನ ಕನಸು ನನಸಾಗಿದೆ ಎಂದು ನಟಿ ಶಿಲ್ಪ ಶೆಟ್ಟಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದದ ಪತ್ರವನ್ನು ಬರೆದಿದ್ದಾರೆ.

ಕೋಟ್ಯಂತರ ಹಿಂದೂ ಭಕ್ತಾದಿಗಳ ಕನಸನ್ನು ನನಸೂ ಮಾಡಿರುವ ದೇಶದ ಪ್ರಧಾನಿಯವರೆಗೆ ನನ್ನ ಧನ್ಯವಾದಗಳು ಎಂದು ಹೇಳುವ ಮೂಲಕ ಹಿಂದಿಯಲ್ಲಿ ಪತ್ರ ಬರೆದಿದ್ದಾರೆ.

ಇನ್ನು ಈ ಪತ್ರವು ಮಹಾರಾಷ್ಟ್ರದ ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶಿಲ್ಪಾ ಶೆಟ್ಟಿಯವರು ಈ ಪೋಸ್ಟನ್ನು ಹಂಚಿಕೊಂಡಿದ್ದಾರೆ.

ರಾಮ ಮಂದಿರ ನಿರ್ಮಾಣದ ಮೂಲಕ ಪ್ರಧಾನಿ ಮೋದಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಶಿಲ್ಪಾ ಶೆಟ್ಟಿ ಪತ್ರದಲ್ಲಿ ಶ್ಲಾಘಿಸಿದ್ದಾರೆ. ದೇವಾಲಯವನ್ನು ತೆರೆದಿದ್ದಕ್ಕಾಗಿ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ. ಮೋದಿ ಯಾವಾಗಲೂ ದೇವಾಲಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಎಂದೂ ಬರೆದುಕೊಂಡಿದ್ದಾರೆ.

ಕೆಲವರು ಇತಿಹಾಸವನ್ನು ಓದಿದರೆ, ಇತರರು ಅದರಿಂದ ಕಲಿಯುತ್ತಾರೆ. ನಿಮ್ಮಂತಹ ವ್ಯಕ್ತಿಗಳು (ಪ್ರಧಾನಿ ನರೇಂದ್ರ ಮೋದಿ) ಅದನ್ನು ಮರು ಸೃಷ್ಟಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದಾರೆ. ನೀವು ರಾಮ ಜನ್ಮಭೂಮಿಯ 500 ವರ್ಷಗಳ ಇತಿಹಾಸವನ್ನು ಮತ್ತೆ ಬರೆದಿದ್ದೀರಿ. ಇದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳು. ಈ ಶುಭ ಕಾರ್ಯದಿಂದಾಗಿ ನಿಮ್ಮ ಹೆಸರು ಭಗವಾನ್ ಶ್ರೀ ರಾಮನೊಂದಿಗೆ ಎಂದೆಂದಿಗೂ ಉಳಿಯಲಿದೆ” ಎಂದು ಶಿಲ್ಪಾ ಶೆಟ್ಟಿ ಹಿಂದಿಯಲ್ಲಿ ಬರೆದಿದ್ದಾರೆ.

Related