ಮಿಸ್ಟರ್ ನರೇಂದ್ರ ಮೋದಿಯವರೇ ಮಾತಿಗೆ ತಪ್ಪಿದ್ದು ಯಾರು ನಾವಾ ನೀವು: ಸಿಎಂ

ಮಿಸ್ಟರ್ ನರೇಂದ್ರ ಮೋದಿಯವರೇ ಮಾತಿಗೆ ತಪ್ಪಿದ್ದು ಯಾರು ನಾವಾ ನೀವು: ಸಿಎಂ

ಬೆಂಗಳೂರು: ಕಾಂಗ್ರೆಸ್ ಸರಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಚಾಲನೆ ನೀಡಿದ್ದು ಇಂದಿನಿಂದ ಯುವನಿಧಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದೆ ಎಂದು ಹೇಳಿದರು.

ಯುವನಿಧಿ ಯೋಜನೆಗೆ ಚಾಲನೆ ನೀಡಿ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಜನರಿಗೆ ಅರ್ಥವಾಗಬೇಕು ಏನು ಈ ಯುವನಿಧಿ ಕಾರ್ಯಕ್ರಮ ಏನು ಎಂಬುದು ಜನರಿಗೆ ಗೊತ್ತಾಗಬೇಕು.

ಕಳೆದ ಬಾರಿ ದೇಶದ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ್ದರು ಆದ್ರೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ರಾ??? ನಾನು ಈಗ ಕೇಳ್ತೀನಿ ನಿರುದ್ಯೋಗಿಗಳಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದ ಪ್ರಧಾನಮಂತ್ರಿ 10  ವರ್ಷಗಳಿಂದ ಅಂದ್ರೆ ಇಲ್ಲಿಯವರೆಗೆ 20 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿತ್ತು. ಮಿಸ್ಟರ್ ನರೇಂದ್ರ ಮೋದಿ ಮಾತು ತಪ್ಪಿದ್ಯಾರು? ಮೋದಿಯವರು ಮಾತು ಕೊಟ್ಟ ಪ್ರಕಾರ ನಡೆದುಕೊಂಡಿಲ್ಲವೆಂದು ನರೇಂದ್ರ ಮೋದಿಯವರ ವಿರುದ್ಧ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಮಿಸ್ಟರ್ ನರೇಂದ್ರ ಮೋದಿಯವರೇ ಮಾತಿಗೆ ತಪ್ಪಿದ್ದು ಯಾರು ನಾನು ನೀವು ಎಂದು ಪ್ರಶ್ನಿಸಿದ್ದಾರೆ. ಮಾತು ತಪ್ಪಿಸಿಕೊಂಡಿದ್ದು ನರೇಂದ್ರ ಮೋದಿಜಿ ಅವರೇ ನಾವಲ್ಲ. ನಾವು ಮಾತು ಕೊಟ್ಟ ಪ್ರಕಾರ ನಡೆದುಕೊಂಡಿದ್ದೇವೆ ಎಂದರು. ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಂಡಿದ್ದೇವೆ ಇದೇ ಬಿಜೆಪಿಯವರಿಗೂ ನಮಗೂ ಇರುವ ವ್ಯತ್ಯಾಸ ಎಂದರು.

ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಹೇಳಿದ ತಕ್ಷಣನೇ ನಮ್ಮ ಯುವಕ ಯುವತಿಯರು ಮೋದಿ ಮೋದಿ ಮೋದಿ ಎನ್ನುತ್ತಿದ್ದರು ಎಂದು ಮೋದಿಯವರ ಬಗ್ಗೆ ಹಾಸ್ಯವಾಗಿ ಮಾತನಾಡಿದರು. ಕೊಟ್ಟ ಮಾತನ್ನು ಉಳಿಸ್ಕೊಂಡ್ರಾ?  ಮೋದಿಯವರು ಬರಿ ಸುಳ್ಳು ಹೇಳೋದೇ. ಅದಿಕ್ಕೆ ನಾನು ಅನೇಕ ಸಾರಿ ಹೇಳಿದ್ದೀನಿ ಈ ದೇಶ ಕಂಡಂತಹ ಪ್ರಧಾನಮಂತ್ರಿಗಳಲ್ಲಿ ನರೇಂದ್ರ ಮೋದಿಯವರಂತಹ ಸುಳ್ಳು ಹೇಳುವ ಪ್ರಧಾನಮಂತ್ರಿಯನ್ನು ಎಂದಿಗೂ ನೋಡಿರುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾಲದಲ್ಲಿದ್ದಾರೆ.

Related