ಕಾನೂನು ಉಲ್ಲಂಘ ಮಾಡಿದ್ರೆ ಯಾರು ಸುಮ್ಮನಿರಲ್ಲಿ: ಪರಂ

ಕಾನೂನು ಉಲ್ಲಂಘ ಮಾಡಿದ್ರೆ ಯಾರು ಸುಮ್ಮನಿರಲ್ಲಿ: ಪರಂ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಕನ್ನಡ ನಾಮಫಲಕ ತೆರವು ಬಗ್ಗೆ ಕರವೇ ಸಂಘಟನೆಗಳು ಬೀದಿಗಿಳಿದದು ಹೋರಾಟ ಮಾಡುತ್ತಿದ್ದಾರೆ.

ಇನ್ನು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಹ ಸಚಿವ ಪರಮೇಶ್ವರವರು, ನಮ್ಮ ಸರ್ಕಾರ ಕನ್ನಡದ ಪರವಾಗಿ, ಕನ್ನಡವನ್ನು ರಕ್ಷಣೆ ಮಾಡುವ ವಿಚಾರದಲ್ಲಾಗಲಿ, ಕನ್ನಡ ಯೋಜನೆಗಳ ಕಾರ್ಯಕ್ರಮಗಳನ್ನು, ಭಾಷಾವಾರು ತೀರ್ಮಾನಗಳನ್ನ ಕನ್ನಡದ ಪರವಾಗಿ ತೆಗೆದುಕೊಳ್ಳುವಂತಹ ವಿಚಾರಕ್ಕೆಂದು ನಮ್ಮ ಸರ್ಕಾರ ಯಾವತ್ತೋ ನಿಂತಿದೆ ಎಂದು ಸ್ಪಷ್ಟವಾಗಿ ತಿಳಿಸುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಕನ್ನಡದಲ್ಲಿ ಆಡಳಿತ ಮಾಡಬೇಕೆಂದು ನಾವು ಅನೇಕ ಬಾರಿ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ ಅನುಷ್ಠಾನವನ್ನು ಮಾಡಿದ್ದೇವೆ. ಇಂಥ ಸಂದರ್ಭದಲ್ಲಿ ಕನ್ನಡದ ನಾಮಫಲಕವನ್ನು ಹಾಕಬೇಕೆಂದು ಸರ್ಕಾರ ಈಗಾಗಲೇ ಅದರ ಬಗ್ಗೆ ಎಲ್ಲಾ ರೀತಿಯ ಟ್ರೇಡ್ ಲೈಸೆನ್ಸ್ ಕೊಡಬೇಕೆಂದು ಮಾತುಕತೆಯಾಗಿದೆ ಎಂದರು.

ಇನ್ನು ಲೈಸೆನ್ಸ್ ಕೊಡುವ ಸಮಯದಲ್ಲಿ ಕೂಡ ಕನ್ನಡ ಬೋರ್ಡ್ ಬಗ್ಗೆ ಹೇಳಿದ್ದೇನೆ. ಈಗ ಕರವೇ ಬಲವಂತವಾಗಿ ಬೋರ್ಡ್ ತೆಗೆಯೋದು, ಒಡೆಯೋದು ಮಾಡಿದ್ದಾರೆ. ಸಮಸ್ಯೆ ಇದ್ರೆ ನಮ್ಮ ಗಮನಕ್ಕೆ ತರಬೇಕಿತ್ತು. ಸಾರ್ವಜನಿಕರಿಗೆ ಧಕ್ಕೆ ತರುವ ಕೆಲಸ ಮಾಡಬಾರದಾಗಿತ್ತು. ಅದಕ್ಕಾಗಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಕನ್ನಡ ಕಡ್ಡಾಯ ಮಾಡೋದಕ್ಕೆ ಸೂಚನೆ ಕೊಟ್ಟಿದ್ದೇವೆ. ಬಿಬಿಎಂಪಿಯವರು ಫೆಬ್ರವರಿ 28 ಗಡುವು ನೀಡಿದ್ದಾರೆ. ಕಡ್ಡಾಯ ಮಾಡ್ತೀವೆ ಸ್ವಲ್ಪ ಸಮಯ ಕಾಯಬೇಕಲ್ವಾ ಎಂದು ಹೇಳಿದರು.

Related