ಎಲ್ಲಿ ನೋಡಿದರೂ ರಾಬರ್ಟ್ ಹವಾ

ಎಲ್ಲಿ ನೋಡಿದರೂ ರಾಬರ್ಟ್ ಹವಾ

ಯಾದಗಿರಿ : ಎಲ್ಲಿ ನೋಡಿದರೂ ರಾಬರ್ಟ್ ಹವಾ ಶುರವಾಗಿದೆ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಗುರುತಿಸಿಕೊಂಡಿರುವ ದರ್ಶನ ಅವರು ಚಿತ್ರ

ಬಿಡುಗಡೆಗೊಂಡಿದೆ ಚಿತ್ರಮಂದಿರ ದತ್ತ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದರು.
ಟಾಕೀಸ್‌ನಲ್ಲಿ ಡಿ ಬಾಸ ದರ್ಶನ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.

ಯಾದಗಿರಿ ಶಹಾಪೂರದ ಜಯಶ್ರೀ ಚಿತ್ರಮಂದಿರದಲ್ಲಿ ಟಿಕೆಟ್ ಪಡೆದ ಅಭಿಮಾನಿಗಳು ಉತ್ಸಾಹದಿಂದ ಒಳಗೆ ಹೋಗುವ ಸಂದರ್ಭದಲ್ಲಿ ನೂಕೂನುಗ್ಗಲು ಉಂಟಾಗಿ, ಚಿತ್ರಮಂದಿರದ ಗಾಜಿನ ಮುಖ್ಯ ಬಾಗಿಲು ಪಿಸ್ ಪಿಸ್ ಆದ ಘಟನೆ ನಡೆದಿದೆ.

ಒಟ್ಟಿನಲ್ಲಿ ಬಹುದಿನಗಳ ನಂತರ ಬಂದ ರಾಬರ್ಟ್ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಗ್ಲಾಸ್ ಶಿವರಾತ್ರಿ ಹಬ್ಬಕ್ಕೆ ರಸದೌತಣದ ಗಿಫ್ಟ್ ನೀಡಿದಂತಾಗಿದೆ.

Related