ಸರ್ವೇ ಇಲಾಖೆಯಲ್ಲಿನ ಡಿಡಿಎಲ್‍ಆರ್ ನೇಮಕ ಯಾವಾಗ?

ಸರ್ವೇ ಇಲಾಖೆಯಲ್ಲಿನ ಡಿಡಿಎಲ್‍ಆರ್ ನೇಮಕ ಯಾವಾಗ?

ದೇವದುರ್ಗ: ತಾಲೂಕಿನ ಭೂಮಾಪನ ಕಚೇರಿಯಲ್ಲಿ ಡಿ.ಡಿ.ಎಲ್.ಆರ್. ಇಲ್ಲದೆ ತಾಲ್ಲೂಕಿನ ಜನರು ದಿನವೂ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಜನರು ಜಮೀನುಗಳನ್ನು ಮಾರಾಟ ಮಾಡಿ ನೋಂದಣಿ ಹಣ ಕೊಡುವುದಾಗಿ ಖರೀದಿದಾರರು ಹೇಳುತ್ತಾರೆ. ಇತ್ತ ಕಚೇರಿಯಲ್ಲಿ ಡಿ.ಡಿ.ಎಲ್.ಆರ್ ಇಲ್ಲದ ಕಾರಣ ಅದೆಷ್ಟೋ ಕಡತಗಳು ಹಿಸ್ಸಾ ರದ್ಧತಿಯಾಗದೆ ಮಾರಾಟಗಾರರು ಕಂಗಾಲಾಗುವ ಪರಸ್ಥಿತಿ ನಿರ್ಮಾಣವಾಗಿದೆ. ಭೂ ಮಾಪನ ಇಲಾಖೆಯ ಡಿ.ಡಿ.ಎಲ್.ಆರ್. ಅಧಿಕಾರಿಯನ್ನು ನೇಮಕ ಮಾಡುವುದು ಯಾವಾಗ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸರ್ಕಾರದ ಬೇಜವಾಬ್ದಾರಿ ಆಡಳಿತವನ್ನು ಪ್ರಶ್ನಿಸಿದೆ.
ಜನರಿಂದ ಇಲಾಖೆಗೆ ಬಂದಂತಹ ಅರ್ಜಿಗಳು ಸರ್ಕಾರದ ಭೂ ಮಾಪಕರಿಗೆ ಅಲರ್ಟ್ ಆಗಬೇಕಾದ ಕಡತಗಳು ಡಿ.ಡಿ.ಎಲ್.ಆರ್. ಇಲ್ಲದೆ ಹಾಗೇ

ಉಳಿದುಕೊಂಡುಬಿಟ್ಟಿವೆ. ತಕ್ಷಣ ಖಾಯಂ ಡಿ.ಡಿ.ಎಲ್.ಆರ್. ಅವರನ್ನು ಕಚೇರಿಗೆ ನೇಮಿಸಬೇಕು. ಇಲ್ಲವಾದರೆ ಪ್ರಗತಿಪರ ರೈತರು ಮತ್ತು ಅಭಿವೃದ್ಧಿಯ ಚಿಂತನೆಯ ಸಂಘಟನೆಗಳು ಸೇರಿಸಿಕೊಂಡು ತಾಲ್ಲೂಕು ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ದಲಿತ ಕಲಾ ಮಂಡಳಿಯ ರಾಜ್ಯ ಸಂಚಾಲಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ ((ಪ್ರೊ.ಬಿ.ಕೃಷ್ಣಪ್ಪ) ಸ್ಥಾಪಿತ ಬಣದ ಸದಸ್ಯ ಹೈದರಾಲಿ ಪಲಕನಮರಡಿ ಪತ್ರಿಕೆಯೊಂದಿಗೆ ಮಾತನಾಡಿ ಒತ್ತಾಯಿಸಿದ್ದಾರೆ.

Related