ದೆಹಲಿ ದಂಗಲ್ ಗೆ ಕಾರಣವೇನು

ದೆಹಲಿ ದಂಗಲ್ ಗೆ ಕಾರಣವೇನು

ನವದೆಹಲಿ,ಫೆ. 26 : ರಾಷ್ಟ್ರರಾಜಧಾನಿ ಸರಣಿ ಹಿಂಸಾಚಾರದ ಹಿಂದಿರೋ ಅಸಲಿ ಕಾರಣವೇನು? ಬೆಂಕಿ ಹಚ್ಚುತ್ತಿರೋರ ಉದ್ದೇಶವಾದ್ರೂ ಏನು? ಇಷ್ಟೇಲ್ಲಾ ರಾದ್ಧಾಂತಕ್ಕೆ ಕಾರಣವಾಗಿರುವ ಸಂಗತಿಗಳೇನು? ಸಿಎಎ ಹೆಸರಲ್ಲಿ ನಡೀತಿರೋ ಷಡ್ಯಂತ್ರನಾ ಇದು? ಇಂಥಾ ಹತ್ತಾರು ಪ್ರಶ್ನೆಗಳು ಕಾಡ್ತಿದೆ. ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಇಂದು ನಾಲ್ವರು ಬಲಿಯಾಗಿದ್ದು, ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಸಂತ್ರಸ್ತರಿಗೆ ನೆರವು ನೀಡುತ್ತಿರುವ ಗುರು ತೇಜ್ ಬಹದ್ದೂರ್ ಆಸ್ಪತ್ರೆ ಮೂಲಗಳಿಂದ ಮಾಹಿತಿ ನೀಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಈಶಾನ್ಯ ದೆಹಲಿಯ ಹತ್ತು ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಜಫರಾಬಾದ್, ಗೋಕುಲ್ಪುರಿ, ಮೌಜ್ಪುರ್ ಸೀಲಂಪುರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ದೆಹಲಿ ಪೊಲೀಸ್ ಕಂಡಲ್ಲಿ ಗುಂಡು ಹಾರಿಸುವ ಆದೇಶ ನೀಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ್ದಂತೆ ಕಂಡು ಬಂದರೂ ಈಶಾನ್ಯ ದೆಹಲಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಚ್ಚೇರಿಕೆ ಕ್ರಮವಾಗಿ ಹೆಚ್ಚುವರಿ ದೆಹಲಿ ಪೊಲೀಸ್ ಮತ್ತು ಶಸ್ತ್ರ ಸಜ್ಜಿತ ಮೀಸಲು ಪಡೆಗಳನ್ನು ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು ಸಿಬಿಎಸ್ಸಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.

Related