ನಮ್ಮ ಸರ್ಕಾರ ಇದ್ರೆ ಏನು ಆಯ್ತು? ಕಳ್ಳರು ಕಳ್ಳರೇ ಅಲ್ವಾ?:  ಯತ್ನಾಳ್

ನಮ್ಮ ಸರ್ಕಾರ ಇದ್ರೆ ಏನು ಆಯ್ತು? ಕಳ್ಳರು ಕಳ್ಳರೇ ಅಲ್ವಾ?:  ಯತ್ನಾಳ್

ಬೆಂಗಳೂರು: ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ಅವರು ಆಗಾಗ ಸ್ವಪಕ್ಷ ಬಿಜೆಪಿ ಮೇಲೆ ವಾಗ್ದಾಳಿ ಮಾಡುತ್ತಲೇ ಇರುತ್ತಾರೆ. ಹೌದು, ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಅವರು ಈಗ ಮತ್ತೊಂದು ಹೊಸ ಬಾಂಬನ್ನು ಸಿಡಿಸಿದ್ದಾರೆ.

ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಮಾಸ್ಕ್, ಬೆಡ್‌ಗಳಲ್ಲೂ ಮಾಫಿಯಾ ನಡೆದಿದೆ ಎಂದು ಬಿಜೆಪಿಯ ಮೇಲೆ ಆರೋಪ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಕೇಸ್ ಬಳಿಕ ಅಪ್ಪಾಜಿಯದ್ದೇ ಎಂದು ಹೇಳುವ ಮೂಕಲಕ ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ತನಿಖೆ ಮಾಡಿಸುವೆ ಎಂದು ಹೇಳಿದರು.

45 ರೂಪಾಯಿ ಮಾಸ್ಕ್ ಗೆ 485 ಬಿಲ್ ಹಾಕಿದ್ದಾರೆ. 10 ಸಾವಿರ ಬೆಡ್‌ಗಳ ಬಾಡಿಗೆ ಒಂದು ದಿನದ ಬಿಲ್ ನಲ್ಲಿ ಖರೀದಿ ಮಾಡಿದ್ರೆ ಎರಡು ಬೆಡ್ ಬರ್ತಿದ್ದವು. ಮಾಸ್ಕ್, ಬೆಡ್‌ಗಳಲ್ಲೂ ಭ್ರಷ್ಟಾಚಾರ ನಡೆದಿದೆ. ನಮ್ಮ ಸರ್ಕಾರ ಇದ್ರೆ ಏನು ಆಯ್ತು? ಕಳ್ಳರು ಕಳ್ಳರೇ ಅಲ್ವಾ? ನನಗೆ ಆಸ್ಪತ್ರೆಯಲ್ಲಿ 5 ಲಕ್ಷ ಬಿಲ್ ಹಾಕಿದರು. ಇನ್ನು ಬಡವರು ಏನು ಮಾಡಬೇಕು. ಕೊರೊನಾ ವೇಳೆ ಕೋಟಿ ಕೋಟಿ ಲೂಟಿ ಆಗಿದೆ.

ಕೊರೊನಾ ಸಂದರ್ಭದಲ್ಲಿ ಒಂದೊಂದು ರೋಗಿಗೆ 8 ರಿಂದ 10 ಲಕ್ಷ ಬಿಲ್ ಮಾಡಿದ್ದಾರೆ. ನನಗೆ ಕೊರೊನಾ ಬಂದಾಗ ಇಡೀ ಸಂಬಳವೆಲ್ಲಾ ಆಸ್ಪತ್ರೆಗೆ ಹೋಯ್ತು ಎಂದರು.

ನನ್ನ ಉಚ್ಚಾಟನೆ ಮಾಡಿದ ಮರುದಿನವೇ ದಾಖಲೆ ಬಿಡುಗಡೆ ಮಾಡುವೆ. ಉಚ್ಛಾಟನೆ ಮಾಡಲು, ನೋಟೀಸ್ ನೀಡಲಿ ಅವರ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ. ಉಚ್ಚಾಟನೆ ಮಾಡಿದ ಮರುದಿನ ಎಲ್ಲಾ ಹೇಳ್ತೀನಿ, ದಾಖಲೆ ಬಿಡುಗಡೆ ಮಾಡುವೆ ಎಂದರು.

 

Related