ದೇವರ ಪ್ರಸಾದ ಸೇವಿಸಿ ಮಹಿಳೆ ಸಾವು ಹೊಸಕೋಟೆ ಶಾಸಕ ಹೇಳಿದ್ದೇನು?

ದೇವರ ಪ್ರಸಾದ ಸೇವಿಸಿ ಮಹಿಳೆ ಸಾವು ಹೊಸಕೋಟೆ ಶಾಸಕ ಹೇಳಿದ್ದೇನು?

ಹೊಸಕೋಟೆ: ಹನುಮಾನ್ ಜಯಂತಿಯ ದಿನದಂದು ದೇವರ ಪ್ರಸಾದವನ್ನು ಸೇವಿಸಿ ಸುಮಾರು ನೂರಕ್ಕೂ ಹೆಚ್ಚು ಜನ ಅಸ್ತವ್ಯಸ್ತವಾಗಿದ್ದರಿಂದ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂದರ್ಭದಲ್ಲಿ ಒಬ್ಬ 60 ವರ್ಷದ ಮಹಿಳೆ ಒಬ್ಬರು ಮೃತಪಟ್ಟಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಕೋಟೆಯ ಶಾಸಕರಾದ ಶರತ್ ಬಚ್ಚೇಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ನಗರದಲ್ಲಿ 6 ಆಸ್ಪತ್ರೆಗಳಲ್ಲಿ 135 ಪ್ರಕರಣಗಳು ದಾಖಲಾಗಿದ್ದು ಇದರ ಪೈಕಿ 36 ಪ್ರಕರಣಗಳು ಐಸಿಯು ನಲ್ಲಿ ಇದ್ದಾರೆ. ಇನ್ನು 97 ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಇಬ್ಬರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಿರುತ್ತಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ನೇರವಾಗಿ ವೈಕುಂಠ ಏಕಾದಶಿಯ ದಿನದಂದು ಸೇವಿಸಿರುವ ಪ್ರಸಾದ ಅಥವಾ ಹನುಮ ಜಯಂತಿಯ ದಿನದಂದು ಸೇವಿಸಿರುವ ಪ್ರಸಾದದಿಂದ ಈ ಪ್ರಕರಣ ನಡೆದಿದೆ ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದರು.

ಸ್ಟೂಲ್ ಸ್ಯಾಂಪಲ್ ಅನಾಲಿಸಿಸ್ ಮಾಡ್ತಿದ್ದೇವೆ, ಅನಲಿಸಿಸ್ ಮಾಡಿದ ವರದಿ ಬಂದ ನಂತರವೇ ಇದರ ಬಗ್ಗೆ ನಾವು ಮಾತಾಡಲು ಆಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ತಾಲೂಕು ಆಡಳಿತ ಆರೋಗ್ಯ ಇಲಾಖೆ ಪೊಲೀಸ್ ಸಿಬ್ಬಂದಿ ನಮ್ಮೆಎಲ್ಲರ ಗಮನ ಕೂಡ ಬಂದಂತಹ ಅಸ್ವಸ್ಥರಿಗೆ ಒಳ್ಳೆ ಮಟ್ಟದ ಚಿಕಿತ್ಸೆಯನ್ನು ನೀಡಲು ತಾಲೂಕು ವಿವಿಧ ಭಾಗಗಳಿಂದ ನಾವು ಆಂಬುಲೆನ್ಸ್ ಗಳನ್ನು ಈಗಾಗಲೇ ತರಿಸಿಕೊಂಡಿರುತ್ತೇವೆ, ಆಶಾ ಕಾರ್ಯಕರ್ತೆಯರನ್ನು ಹೊಸಕೋಟೆ ನಗರಕ್ಕೆ ಈಗಾಗಲೇ ಕರೆಸಿಕೊಂಡಿದ್ದು ಎಂದು ಹೇಳಿದರು,

ಆಸ್ಪತ್ರೆಯಲ್ಲೂ ಕೂಡ ಒಬ್ಬ ಆರೋಗ್ಯ ಸಿಬ್ಬಂದಿ, ಒಬ್ಬ ಕಂದಾಯ ಇಲಾಖೆ ಅಧಿಕಾರಿಗಳು ಒಬ್ಬ ಪೊಲೀಸ್ ಅಧಿಕಾರಿಗಳು ಮೂವರು ಸೇರಿ ಹೊಸಕೋಟೆ ತಾಲೂಕು ನೋಡಲ್ ಆಫಿಸರ್ ಗಳನ್ನು ನೇಮಕ ಮಾಡಿ‌, ಯಾರೇರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೇ ಅವರಿಗೆ ಚಿಕಿತ್ಸೆ ನೀಡಬೇಕೆಂದು ಹೇಳಿದ್ದೇವೆ ಎಂದರು.

ಈಗಾಗಲೇ ಹೆಚ್ಚಿನ ಚಿಕಿತ್ಸೆಗಾಗಿ ನಾವು ವಿಕ್ಟೋರಿಯಾ ಆಸ್ಪತ್ರೆಯ ಜೊತೆ ಮಾತುಕತೆ ನಡೆಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ನಾವು ಎಲ್ಲಾ ರೀತಿಯ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಇನ್ನು ಇದರ ಜೊತೆಗೆ ಸುತ್ತಮುತ್ತಲಿರುವ ಖಾಸಗಿ ಆಸ್ಪತ್ರೆಗಳ ಜೊತೆಗೆ ವೈದೇಹಿ, ಈಸ್ಟ್ ಪಾಯಿಂಟ್ ಆಸ್ಪತ್ರೆಗಳ ಜೊತೆ ನಾವು ಮಾತನಾಡಿಕೊಂಡು ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ದಯವಿಟ್ಟು ಜನರು ಯಾರು ಕೂಡ ಗಾಬರಿಯಾಗಬೇಡಿ ನಾವು ಎಲ್ಲ ರೀತಿಯ ಕ್ರಮ ಜರುಗಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಮೇಲ್ನೋಟಕ್ಕೆ ಮಾತ್ರ ಇದು ಫುಡ್ ಪಾಯಿಸನ್ ಎಂದು ಹೇಳಲಾಗುತ್ತಿದೆ ಆದರೆ ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಸಂಪೂರ್ಣವಾದ ಮಾಹಿತಿಯಿಂದಲೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಈಗಾಗಲೇ ಯಾರ್ಯಾರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದದ್ದಾರೆ ಅವರಿಗೆಲ್ಲರಿಗೂ ಉಚಿತ ಚಿಕಿತ್ಸೆ ನೀಡುವುದಾಗಿ ನಾವು ತಿಳಿಸಿರುತ್ತೇವೆ ಎಂದು ಹೇಳಿದರು.

Related