ನೇಹಾ ಕೊಲೆ ಪ್ರಕರಣಕ್ಕೆ ಡಿಸಿಎಂ ಹೇಳಿದ್ದೇನು?

ನೇಹಾ ಕೊಲೆ ಪ್ರಕರಣಕ್ಕೆ ಡಿಸಿಎಂ ಹೇಳಿದ್ದೇನು?

ಬೆಂಗಳೂರು: ನಿನ್ನೆ ಹುಬ್ಬಳ್ಳಿ ನಗರದಲ್ಲಿವಿಬಿವಿ ಕಾಲೇಜಿನ ವಿದ್ಯಾರ್ಥಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಕಾನೂನು ಏನಿದೆ, ಆ ಕಾನೂನಿಗೆ ಯಾರಾದರೇನು ಎಲ್ಲರಿಗೂ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ.

ಯಾರೇ ಆಗಲಿ ಕಾನೂನನ್ನು ಕೈ ತೆಗೆದುಕೊಳ್ಳಲು ಆಗುವುದಿಲ್ಲ. ನಾವು ಇದನ್ನು ಖಂಡಿಸುತ್ತೇವೆ. ಪೊಲೀಸರಿಗೆ ಸರಿಯಾದ ರೀತಿ ಕ್ರಮ ಕೈಗೊಳ್ಳಲು ನಾವು ಈಗಾಗಲೇ ತಿಳಿಸಿದ್ದೇವೆ ಎಂದು ಹೇಳಿದರು.

ಬಸವರಾಜ್ ಬೊಮ್ಮಾಯಿ ಕಾಲದಲ್ಲೂ ಕೂಡ ಇತರ ಪ್ರಕರಣಗಳು ನಡೆದಿರುವುದುಂಟು. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಇಂಥ ಘಟನೆಗಳು ನಡೆದಿರಲಿಲ್ಲವೇ? ಸರ್ಕಾರ ಯಾವುದೇ ಅಧಿಕಾರದಲ್ಲಿರಲಿ, ಖಾಸಗಿ ವ್ಯವಹಾರಗಳು ನಡೆಯುತ್ತಿರುತ್ತವೆ, ಆದರೆ ತಮ್ಮ ಸರ್ಕಾರ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂದರು.

Related