ಮಿಕ್ಸ್ ಫ್ರುಟ್ ಜ್ಯೂಸ್ ಕುಡಿಯುವ ಪರಿಣಾಮಗಳೇನು?

ಮಿಕ್ಸ್ ಫ್ರುಟ್ ಜ್ಯೂಸ್ ಕುಡಿಯುವ ಪರಿಣಾಮಗಳೇನು?

ಇಂದಿನ ದಿನಗಳಲ್ಲಿ ಜನರು ಎಲ್ಲ ಕೆಲಸಗಳನ್ನು ಅತಿ ಸುಲಭ ಮಾಡಿಕೊಂಡಿದ್ದಾರೆ. ಹಾಗೂ ಅವರ ಜೀವನ ಶೈಲಿಯಲ್ಲಿಯೂ ಸಹ ಬದಲಾಗಿದೆ. ಎಲ್ಲಾ ಹಣ್ಣುಗಳನ್ನು ತಿನ್ನಲಿ ಆದರೆ ಅದಕ್ಕೆ ಆದಂತ ಕ್ರಮಗಳಿರುತ್ತದೆ. ಎಲ್ಲಾ ಹಣ್ಣುಗಳ ಮಿಕ್ಸ್ ಫ್ರೂಟ್ ಜ್ಯೂಸ್ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ.

ಅನೇಕ ಜನರು ವಿವಿಧ ಹಣ್ಣಿನ ರಸಗಳನ್ನು ಮಿಕ್ಸ್ ಮಾಡಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ನೀವು ಆರೋಗ್ಯವೆಂದು ಕುಡಿಯುತ್ತಿರುವ ಈ ಮಿಕ್ಸ್ ಫ್ರುಟ್ ಜ್ಯೂಸ್ ನಲ್ಲಿ ಕೆಲವು ಅನಾನುಕೂಲಗಳನ್ನು ಹೊಂದಿದೆ.

ಆರೋಗ್ಯಕರ ಮನಸ್ಸು ಮತ್ತು ಆರೋಗ್ಯಕರ ದೇಹಕ್ಕಾಗಿ, ನಾವು ಪ್ರತಿದಿನ ಒಂದಲ್ಲ ಒಂದು ರೀತಿಯ ಜ್ಯೂಸ್ ಸೇವಿಸುತ್ತೇವೆ. ಅದರಲ್ಲೂ ಫ್ರುಟ್ ಜ್ಯೂಸ್ ಎಲ್ಲರ ಫೆವರೀಟ್. ಅದರೆ ಕೆಲವರಂತೂ ಎಲ್ಲಾ ಹಣ್ಣುಗಳ ಜೀವಸತ್ವಗಳು ಜೊತೆಯಾಗಿ ಸಿಕ್ರೆ ಚೆನ್ನಾಗಿರುತ್ತೆ ಎಂದು ವಿವಿಧ ಹಣ್ಣುಗಳ ಮಿಕ್ಸ್ ಫ್ರುಟ್ ಜ್ಯೂಸ್ ಕುಡಿಯುತ್ತಾರೆ. ಇದೇನೋ ನಿಮ್ಮ ಬಾಯಿಗೆ ರುಚಿ ನೀಡುತ್ತೆ ಅನ್ನೋದೇನೋ ನಿಜಾ.

ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತಗಳು

ಕೆಲವು ಹಣ್ಣುಗಳು ಹೆಚ್ಚಿನ ಸಕ್ಕರೆ ಅಂಶ ಹೊಂದಿರುತ್ತವೆ. ಎಲ್ಲಾ ರೀತಿಯ ಹಣ್ಣುಗಳ ರಸ ಜೊತೆಯಾಗಿ ಮಿಕ್ಸ್ ಮಾಡಿ ಕುಡಿಯೋದ್ರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗುತ್ತದೆ. ಇದು ಸಮಸ್ಯೆ ಹೆಚ್ಚಿಸಬಹುದು, ವಿಶೇಷವಾಗಿ ಮಧುಮೇಹ ಸಮಸ್ಯೆ ಇದ್ರೆ ಇದನ್ನ ಕುಡಿಯಲೇಬಾರದು.

ಪೋಷಕಾಂಶಗಳ ನಷ್ಟ

ಪ್ರತಿಯೊಂದು ಹಣ್ಣುಗೆ ಅದರದ್ದೇ ಆದ ಪೋಷಕಾಂಶಗಳಿರುತ್ತವೆ. ಆದರೆ ವಿವಿಧ ಹಣ್ಣಿನ ರಸಗಳನ್ನು ಒಟ್ಟಿಗೆ ಮಿಕ್ಸ್ ಮಾಡಿ ಸೇವಿಸೋದರಿಂದ ಅವುಗಳ ಪೋಷಕಾಂಶ ಬದಲಾಗುತ್ತೆ. ತಜ್ಞರ ಪ್ರಕಾರ, ಕೆಲವು ಹಣ್ಣುಗಳು ಕಿಣ್ವಗಳು ಅಥವಾ ಸಂಯುಕ್ತಗಳನ್ನು ಹೊಂದಿರಬಹುದು, ಅವು ಇತರ ಆಹಾರದೊಂದಿಗೆ ಬೆರೆತಾಗ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಇದು ಹಣ್ಣಿನಲ್ಲಿರುವ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ.

Related