ಬೆಳ್ಳಂ ಬೆಳಗ್ಗೆ ಪೊಲೀಸ್ ರ ಗುಂಡಿನ ಸದ್ದು

ಬೆಳ್ಳಂ ಬೆಳಗ್ಗೆ ಪೊಲೀಸ್ ರ ಗುಂಡಿನ ಸದ್ದು

ಬೆಂಗಳೂರು, ಮಾ. 3 : ಕೊಲೆ ಆರೋಪಿ ಮೇಲೆ ಡಿಜೆ ಹಳ್ಳಿ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಯೂನುಸ್ ಬಟ್ಟಿ ಎಂಬ ಕೊಲೆ ಪ್ರಕರಣದ ಆರೋಪಿ. ಪೊಲೀಸರು ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳ ಒಂದು ಗುಂಪು ಎರಡು ದಿನಗಳ ಹಿಂದೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳಿಂದ ಅಮ್ಜದ್ ಎಂಬಾತನನ್ನು ಕೊಲೆ ಮಾಡಿತ್ತು. ಕೊಲೆ ಮಾಡಿದ್ದ ತಂಡದ ನಾಯಕ ಯುನುಸ್ ಎಂಬುದು ಬೆಳಕಿಗೆ ಬಂದಿತ್ತು.
ಒಂದು ದಿನದ ಹಿಂದೆ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮಂಗಳವಾರ ಮುಂಜಾನೆ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಪೊಲೀಸ್ ತಂಡ ಆತನೊಂದಿಗೆ ತೆರಳಿತ್ತು. ಆದರೂ ಆತ ಪರಾರಿಯಾಗಲು ಯತ್ನಿಸಿದ್ದ. ಆಗ ಇನ್ಸ್ಪೆಕ್ಟರ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಎಚ್ಚರಿಕೆ ಕೊಟ್ಟಿದ್ದರಾದರೂ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮತ್ತೆ ಮುಂದಾಗಿದ್ದಾನೆ. ತಕ್ಷಣ ಪೊಲೀಸರು ಆರೋಪಿ ಯೂನುಸ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿದ ಪರಿಣಾಮ ಕುಸಿದು ಬಿದ್ದ ಆತನನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

Related