ಕಲ್ಯಾಣ ಕರ್ನಾಟಕೋತ್ಸವ ಆಚರಣೆ

ಕಲ್ಯಾಣ ಕರ್ನಾಟಕೋತ್ಸವ ಆಚರಣೆ

ಶಹಾಪುರ :ಹೈದ್ರಾಬಾದ್-ಕರ್ನಾಟಕ ಈಗ ಕಲ್ಯಾಣ ಕರ್ನಾಟಕವಾಗಿದೆ. ಶರಣ ಸಾಹಿತ್ಯದ ತವರಾಗಿರುವ ಈ ನಾಡು ಇತಿಹಾಸದಲ್ಲಿ ತನ್ನದೆಯಾದ ವಿಶಿಷ್ಟ ಹೆಜ್ಜೆ ಗುರುತು ಪ್ರಾಮುಖ್ಯತೆ ಹೊಂದಿದೆ ಎಂದು ತಹಶೀಲ್ದಾರ್ ಮಧುರಾಜ್ ಕೂಡ್ಲಗಿ ಹೇಳಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ತಾಲೂಕಾಡಳಿತದ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯ ಧ್ವಜಾರೋಹಣ ನೇರವೆರಿಸಿ ಮಹಾತ್ಮ ಗಾಂಧೀಜಿ ಮತ್ತು ಸರ್ಧಾರ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಭೀಮಣ್ಣ ಅಂಚೆಸೂಗೂರ ಮಾತನಾಡಿ ಇಡೀ ದೇಶಕ್ಕೆ 1947 ರ ಆ.15 ರಂದು ಸ್ವಾತಂತ್ರ‍್ಯಸಿಕ್ಕರೂ ಹೈದ್ರಾಬಾದ್ ಕರ್ನಾಟಕಕ್ಕೆ ಮಾತ್ರ ಸ್ವಾತಂತ್ರ‍್ಯ ಸಿಕ್ಕಿರಲಿಲ್ಲ. 1948 ಸೆ. 17 ರಂದು ಹೈದ್ರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ‍್ಯ ಸಿಕ್ಕಿತು. 1956 ವರೆಗೆ ಪ್ರತ್ಯೇಕ ಹೈದ್ರಬಾದ್ ರಾಜ್ಯಕ್ಕೆ ಸೇರಿದ್ದವು. ಆದರೆ ಭಾಷಾವಾರು ಪ್ರಾಂತ್ಯ ರಚನೆ ವೇಳೆ ಮೈಸೂರು ರಾಜ್ಯಕ್ಕೆ ಸೇರಿದ್ದವು.ನಂತರದ ದಿನಗಳಲ್ಲಿ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಹಿನ್ನಡೆ ಹೊಂದಿದ ಈ ಭಾಗದ ಅಸಮತೋಲನ ಸರಿಪಡಿಸಲು ಯುಪಿಎ ಸರ್ಕಾರ ಹೈದ್ರಾಬಾದ್-ಕರ್ನಾಟಕಕ್ಕೆ 371 ಜೆ ವಿಧೆಯಕದ ಅನ್ವಯ ವಿಶೇಷ ಸ್ಥಾನ ಕಲ್ಪಿಸಿತು ಎಂದರು.
ಜಿಲ್ಲೆಯ ಉತ್ತಮ ಶಿಕ್ಷಕರಾಗಿ ಆಯ್ಕೆ ಗೊಂಡಿರುವ ಪ್ರೌಢ ಶಾಲೆಯ ಶಿಕ್ಷಕ ನಾಗಪ್ಪ ಮದ್ರಕಿ ಮತ್ತು ಜಿ.ಎಮ್.ಪಿಎಸ್ ಸಗರ ಶಾಲೆಯ ಶಿಕ್ಷಕಿ ರೂಪಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಹನಜ್ ಬೇಗಂ, ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ್ ಚಿಲ್ಲಾಳ, ದೇವಿಂದ್ರಪ್ಪ, ನಗರಸಭೆ ಸದಸ್ಯ ಶಿವುಕುಮಾರ ತಳವಾರ, ಬಸವರಾಜ ಚೆನ್ನೂರ, ತಾಲ್ಲೂಕು ಕಾರ್ಯನಿರ್ವಹಕ ಅಧಿಕಾರಿ ಜಗನಾಥ ಮೂರ್ತಿ, ಕ್ಷೇತ್ರ ಶಿಕ್ಷಣಧಿಕಾರಿ ಸೂರ್ಯವಂಶಿ, ಸರಕಾರಿ ನೌಕರರ ತಾಲೂಕ ಅಧ್ಯಕ್ಷ ರಾಯಪ್ಪಗೌಡ ಹುಡೇದ್ ಇತರರು ಇದ್ದರು.

Related