ಆರ್​ಎಸ್​ಎಸ್​, ಭಜರಂಗದಳ ಯಾವ ಸಂಘಟನೆಯೆಂದು ನೋಡದೇ ಕ್ರಮ ಕೈಗೊಳ್ಳುತ್ತೇವೆ: ಪ್ರಿಯಾಂಕ್ ಖರ್ಗೆ

ಆರ್​ಎಸ್​ಎಸ್​, ಭಜರಂಗದಳ ಯಾವ ಸಂಘಟನೆಯೆಂದು ನೋಡದೇ ಕ್ರಮ ಕೈಗೊಳ್ಳುತ್ತೇವೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ 2023 ನೇ ಚುನಾವಣೆಯ ಮೊದಲು ಭಜರಂಗಿದಳದಂತಹ ಸಂಘಟನೆಗಳು ರಾಜ್ಯದಲ್ಲಿ ಕೋಮು ಗಲಭೆಯನ್ನು ಸೃಷ್ಟಿ ಮಾಡಲು ಮುಂದಾಗಿದ್ದವು.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಭಜರಂಗಿ ದಳದಂತಹ ಸಂಘಟನೆಗಳನ್ನು ಮುಂದುವರೆಯಲು ನಾವು ಬಿಡುವುದಿಲ್ಲ. ರಾಜ್ಯದಲ್ಲಿ ಯಾವುದೇ ಅಹಿತಕರಗಳ ಘಟನೆಗಳು ಜಾತಿ, ಮತ, ಪಂಥ ಎಂಬ ಭೇದ ಭಾವ ಮೂಡಿಸುವಂತಹ ಸಂಘ ಸಂಸ್ಥೆಗಳನ್ನು ನಾವು ಎಂದಿಗೂ ಪ್ರೋತ್ಸಾಹಿಸುವುದಿಲ್ಲವೆಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ

ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಪ್ರಣಾಳಿಕೆಯಲ್ಲಿ ಪಿಎಫ್‌ಐ, ಭಜರಂಗದಳ ಸೇರಿದಂತೆ ಮತೀಯ ಸಂಘಟನೆಗಳ ನಿಷೇಧಿಸುವುದಾಗಿ ಹೇಳಿತ್ತು. ಭಜರಂಗದಳವನ್ನು ಪಿಎಫ್​ಐಗೆ ಹೋಲಿಸಿದ್ದು ಹಾಗೂ ನಿಷೇಧಿಸುವುದಾಗಿ ಹೇಳಿದಕ್ಕೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಸದ್ಯ ಪ್ರಣಾಳಿಕೆಯಲ್ಲಿ ಹೇಳಿದಂತೆ ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ವಿಧಾನಸೌಧದಲ್ಲಿ ನೂತನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಯಾವುದೇ ಸಂಘಟನೆ ಅಥವಾ ಸಮುದಾಯಕ್ಕೆ ಸೇರಿದವರಿರಲಿ. ಕೋಮು ದ್ವೇಷಕ್ಕೆ ಪ್ರೇರೇಪಿಸುವ ಕೆಲಸ ಮಾಡಿದರೆ ನಮ್ಮ ಸರ್ಕಾರ ಕಡಿವಾಣ ಹಾಕಲಿದೆ. ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ಸ್ಪಷ್ಟವಾದ ನಿಲುವುನ್ನ ತೆಗೆದುಕೊಂಡಿದೆ. ಯಾವುದೇ ಸಂಘಟನೆ ಇರಬಹುದು ರಾಜಕೀಯ, ಸಾಮಾಜಿಕ, ನಮ್ಮ ರಾಜ್ಯದ ನೆಮ್ಮದಿಯನ್ನ ಶಾಂತಿ ಕೆಡಿಸಿದ್ರೆ ಕಟ್ಟಿ ಹಾಕ್ತೀವಿ. ಕಾನೂನು ಚೌಕಟ್ಟಿನಲ್ಲಿ, ಸಂವಿಧಾನಾತ್ಮಕವಾಗಿ ಕಟ್ಟಿ ಹಾಕ್ತೀವಿ. ಬಜರಂಗದಳ, ಪಿಎಫ್​ಐ, ಆರ್​ಎಸ್​ಎಸ್ ಇರಬಹುದು ನಿಷೇಧ ಮಾಡೋದಕ್ಕೂ ನಾವು ಹಿಂದೇಟು ಹಾಕೋದಿಲ್ಲ. ಅಸಂವಿಧಾನಿಕ ಚಟುವಟಿಕೆ, ಕಾನೂನು ಬಾಹಿರ ಚಟುವಟಿಕೆ, ಕೋಮು ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಕೊಂಡ್ರೆ ಕಾನೂನು ಮೂಲಕ ಏನ್ ಕ್ರಮ ಕೈಗೊಳ್ಳಬೇಕು ತಗೋತೀವಿ ಎಂದರು.

Related