ನಾವು ದ್ವೇಷದ ರಾಜಕಾರಣ ಮಾಡಲು ಬಂದಿಲ್ಲ: ಸಿಎಂ

ನಾವು ದ್ವೇಷದ ರಾಜಕಾರಣ ಮಾಡಲು ಬಂದಿಲ್ಲ: ಸಿಎಂ

ಕೊಪ್ಪಳ: ನಾವು ಯಾವುದೇ ದ್ವೇಷದ ರಾಜಕಾರಣ ಮಾಡಲು ಬಂದಿಲ್ಲ. ನಾವು ಅಭಿವೃದ್ಧಿ ಕಾರ್ಯವನ್ನು ಮಾಡಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಅವರು ಇಂದು ವಿಜಯಪುರ ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ಕೊಪ್ಪಳ ಗಿಣಿಗೆರಾ ಏರ್ ಸ್ಟ್ರಿಪ್‍ಗೆ ಬಂದಿಳಿದು ವಿಜಯಪುರಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆನೀಡಿದರು.

ತಪ್ಪು ಮಾಡಿದವರಿಗೆ ಏನು ಮಾಡಬೇಕು? ಅವರಿಗೆ ಸುಮ್ಮನೆ ಬಿಟ್ಟುಬಿಡಬೇಕಾ ಎಂದು ಮಾಧ್ಯಮ ಮಿತ್ರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ರಾಮಜನ್ಮಭೂಮಿ ಹೋರಾಟಗಾರರ ಬಂಧನ ವಿಚಾರ ಬಗ್ಗೆ ಪ್ರಶ್ನೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾವು ಹಳೆ ಕೇಸುಗಳನ್ನು ಡಿಸ್ಪೋಸ್ ಮಾಡಿ ಅಂತ ಹೇಳಿದ್ದೇವೆ. ಅದರಲ್ಲಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ನಾವು ದ್ವೇಷದ ರಾಜಕಾರಣ ಮಾಡಿಲ್ಲವೆಂದು ಉತ್ತರಿಸಿದರು.

Related