ಕಲ್ಲಂಗಡಿಗೆ ಕುತ್ತು ತಂದ ಕೊರೊನಾ

  • In State
  • April 18, 2020
  • 205 Views
ಕಲ್ಲಂಗಡಿಗೆ ಕುತ್ತು ತಂದ ಕೊರೊನಾ

ಭಟ್ಕಳ. ಏ.18 : 3-4 ವರ್ಷಗಳ ಇತ್ತೀಚೆಗೆ ಕೃಷಿಯಲ್ಲಿಆಸಕ್ತಿ ಬೆಳೆಸಿಕೊಂಡ ತಾಲೂಕಿನ ಯುವಕರು ಅದರಲ್ಲೇ ಸಾಧನೆ ಕನಸು ಕಂಡಿದ್ದರು. ಇದೀಗ ಕೊರೊನಾ ಎಫೆಕ್ಟ್ನಿಂದ ಇವರ ಕನಸು ಕಮರಿದೆ. ಭಟ್ಕಳ ಆಸರಕೇರಿಯ ಶ್ರೀಕಾಂತ ನಾಯ್ಕ ,ಪಾಂಡು ನಾಯ್ಕ ,ಜಂಭೂರಮಠದ ವೆಂಕಟೇಶ ಮೊಗೇರ , ತಮ್ಮ ಕೃಷಿ ಕನಸು ನನಸಾಗಿಸಲು ಭಟ್ಕಳದಲ್ಲಿ1 ಎಕರೆ ಹಾಗೂ ತಾಲೂಕಿನ ಕಾಯ್ಕಿಣಿಯ ಬಸ್ತಿಯಲ್ಲಿರೈತರೊಬ್ಬರಿಂದ ಸರಿಸುಮಾರು ಏಳೂವರೆ ಎಕರೆ ಭೂಮಿ ಲೀಸ್ ಮೇಲೆ ಪಡೆದುಕೊಂಡು ಜಂಟಿಯಾಗಿ ಕೃಷಿ ಕಾಯಕಕ್ಕೆ ಇಳಿದಿದ್ದಾರೆ. ಕಾಯ್ಕಿಣಿಯಲ್ಲಿದ್ದ ಭೂಮಿ ಸುತ್ತ ಬೇಲಿ ಹಾಕಿ ಕಲ್ಲಂಗಡಿ ಬೆಳೆದರು. ಆರಂಭದಲ್ಲಿ2 ವರ್ಷ ನಿರೀಕ್ಷಿತ ಇಳುವರಿ ಸಿಗಲಿಲ್ಲ. 3ನೇ ವರ್ಷ ಗದ್ದೆ ತುಂಬ ಕಲ್ಲಂಗಡಿ ಬೆಳೆ ಕಂಡು ಮೂವರು ಪುಳಕಿತಗೊಂಡು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಕೊರೊನಾ ಬಂದೇ ಬಿಟ್ಟಿತು.
ಲಕ್ಷಾಂತರ ಹಾನಿ : ಕೊರೊನಾ ಕ್ವಾರೆಂಟೈನ್ದಿಂದಾಗಿ ಕಳೆದ 21 ದಿನಗಳಿಂದ ಮಾರುಕಟ್ಟೆ ಬಂದ್ ಆಗಿದೆ. ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಸಾಗಿಸಲು ಸಾಧ್ಯವಾಗದೇ ನರಕ ಸದೃಶ ವಾತಾವರಣ ನಿರ್ಮಾಣವಾಗಿದೆ. ಬಹಳಷ್ಟು ಹಣ್ಣುಗಳು ಕೊಳೆತು ಹೋಗಿದ್ದರೆ, ಇನ್ನೂ ಕೆಲವು ಒಣಗಿ ಹೋಗಿವೆ. ನಂತರ ಇದ್ದಬಿದ್ದ ಹಣ್ಣುಗಳನ್ನು ಒಂದೆಡೆ ರಾಶಿ ಹಾಕಿ ಮೂವರೂ ಬೆಳೆಗಾರರು ಆಗಸವನ್ನು ನೋಡುತ್ತಿದ್ದಾರೆ. ಕೆಲವಷ್ಟನ್ನು ಊರಿನ ನಡುವೆ ಸಾಗಿಸಿ ಖರ್ಚಿಗೆ ಏನಾದರೂ ಸಿಕ್ಕೀತು ಎಂದುಕೊಂಡವರಿಗೆ ಸಿಗದ ದರ ವಿಪರೀತವಾಗಿ ನಿರಾಸೆ ಮೂಡಿಸಿದೆ.

Related