ಕೃಪಾನಿಧಿ ಗ್ರೂಫ್ ಆಪ್ ಇನ್ಸ್ಟಿಟ್ಯೂಷನ್ ಕಾಲೇಜಿನಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ

ಕೃಪಾನಿಧಿ ಗ್ರೂಫ್ ಆಪ್ ಇನ್ಸ್ಟಿಟ್ಯೂಷನ್ ಕಾಲೇಜಿನಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ

ಮಹದೇವಪುರ: ಸಮಾಜದಲ್ಲಿ ಬದಲಾವಣೆಗಳನ್ನು ತರಲು ಯುವಕರಿಂದ ಮಾತ್ರ ಸಾಧ್ಯವಿದ್ದು, ಅದರ ಪ್ರಾಮುಖ್ಯತೆಯನ್ನು ಅರಿತು ಮತದಾನದ ದಿನಾವಾದ ಮೇ 10 ರಂದು ಎಲ್ಲರಿಂದಲೂ ಮತದಾನ ಮಾಡಿಸಬೇಕೆಂದು ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ವಿದ್ಯಾರ್ಥಿಗಳಲ್ಲಿ ಕೋರಿದರು.

ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಹದೇವಪುರ ವಲಯ ಚಿಕ್ಕಬೆಳ್ಳಂದೂರು ನಲ್ಲಿರುವ ಕೃಪಾನಿಧಿ ಗ್ರೂಫ್ ಆಪ್ ಇನ್ಸ್ಟಿಟ್ಯೂಷನ್ ಕಾಲೇಜಿನಲ್ಲಿ ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಗರದಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿಧಾನಗಳಲ್ಲಿ ಜಾಗೃತಿ ಕಾಮರ್ಯಕ್ರಮಗಳನ್ನು ಹಮ್ಮಿಕೊಂಡು ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಮತದಾನದ ಪ್ರಾಮುಖ್ಯತೆಯ ಬಗ್ಗೆ ಯುವಕರು ಎಲ್ಲರಲ್ಲೂ ಅರಿವು ಮೂಡಿಸಿ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಮಾಡಬೇಕು ಎಂದು ಹೇಳಿದರು.

ಯುವ ಪೀಳಿಗೆ ಮನಸ್ಸು ಮಾಡಿದಲ್ಲಿ ಯಾವುದೇ ರಂಗದಲ್ಲಾಗಲಿ ಬದಲಾವಣೆಗಳನ್ನು ತರುವ ಶಕ್ತಿಯಿದೆ. ತಮ್ಮ ಮನೆಯಲ್ಲಿರುವ ಹಾಗೂ ಅಕ್ಕ-ಪಕ್ಕದ ಮನೆಯವರಲ್ಲಿ ಮತದಾನದ ಕುರಿತು ತಿಳುವಳಿಕೆ ನೀಡಿ ಉತ್ತಮ ಅಭ್ಯರ್ಥಿಗೆ ಮತದಾನ ಮಾಡಲು ತಿಳಿಸಬೇಕೆಂದು ಕೋರಿದರು.

ಈ ವೇಳೆ ವಲಯ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಸ್ವೀಪ್ ನೋಡಲ್ ಅಧಿಕಾರಿಯಾದ ಸಿದ್ದೇಶ್ವರ್, ವಲಯ ಉಪ ಆಯುಕ್ತರಾದ ಸರೋಜಾದೇವಿ, ಕಾಲೇಜು ಪ್ರಾಂಶುಫಾಲರು, ಪ್ರಾಧ್ಯಾಪಕರುಮ ವಿದ್ಯಾರ್ಥಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related