ಕೃಷ್ಣಮಠಕ್ಕೆ ಭೇಟಿ ನೀಡಿ ಯು.ಟಿ. ಖಾದರ್

ಕೃಷ್ಣಮಠಕ್ಕೆ ಭೇಟಿ ನೀಡಿ ಯು.ಟಿ. ಖಾದರ್

ಉಡುಪಿ: ನಿನ್ನೆ ಮತ್ತು ಇಂದು ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ತಾಯಂದಿರು ತಮ್ಮ ಚಿಕ್ಕ ಮಕ್ಕಳಿಗೆ ಕೃಷ್ಣನ ವೇಷವನ್ನು ಹಾಕಿ ಖುಷಿ ಪಡುತ್ತಾರೆ. ಕೇವಲ ಹಿಂದೂ ಸಮುದಾಯದವರು ಮಾತ್ರವಲ್ಲದೆ ಮುಸ್ಲಿಂ ಮಹಿಳೆಯರು ತಮ್ಮ ಮಕ್ಕಳಿಗೆ ಕೃಷ್ಣನ ಉಡುಪನ್ನು ತೊಡಿಸಿ ಸಂತೋಷ ಪಡುತ್ತಾರೆ.

ಅದಲ್ಲದೆ ವಿಧಾನಸಭಾ ಸ್ಪೀಕರ್ ಆಗಿರುವಂತಹ ಯುಟಿ ಖಾದರ್  ಅವರು ಉಡುಪಿ ಖ್ಯಾತ ಕೃಷ್ಣ ಮಠಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಕೃಷ್ಣನ ದರ್ಶನವನ್ನು ಪಡೆದರು.

ಹೌದು, ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ನಗರದ ವಿಖ್ಯಾತ ಕೃಷ್ಣ ಮಠಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು, ನಾಡಿನ ಜನತೆಗೆ ಜನ್ಮಾಷ್ಟಮಿಯ ಶುಭಾಷಯಗಳನ್ನು ತಿಳಿಸಿದರು.

ಜನ್ಮಾಷ್ಟಮಿಯ ಪವಿತ್ರವಾದ ದಿನವಾದ ಇಂದು ಉಡುಪಿಯ ಕೃಷ್ಣ ಮಠಕ್ಕೆ ಆಗಮಿಸಿ ದರ್ಶನ ಪಡೆದಿದ್ದು ಧನ್ಯತೆಯ ಭಾವ ಮೂಡಿಸಿದೆ. ನಾಡಿನ ಜನರೆಲ್ಲ ಪ್ರೀತಿ-ವಿಶ್ವಾಸಗಳೊಂದಿಗೆ ನೆಮ್ಮದಿಯಿಂದ ಬದುಕುವ ಶಕ್ತಿಯನ್ನು ಕೃಷ್ಣ ಪರಮಾತ್ಮ ದಯಪಾಲಿಸಿಸಲಿ, ಕರ್ನಾಟಕ ಹೆಚ್ಚೆಚ್ಚು ಅಭಿವೃದ್ಧಿ ಹೊಂದಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಪೂರಕವಾಗಲಿ ಎಂದು ಕೃಷ್ಣನನ್ನು ಪ್ರಾರ್ಥಿಸಿದ್ದಾಗಿ ಹೇಳಿದರು. ಖಾದರ್ ಅವರೊಂದಿಗೆ ಕೆಲ ಸ್ಥಳೀಯ ನಾಯಕರಿದ್ದರು.

Related