ವಿಕ್ರಾಂತ್ ರೋಣ ಚಿತ್ರ ಬಿಡುಗಡೆಗೆ ಶುಭಹಾರೈಸಿದ ಬಿಗ್ ಬಿ..

  • In Cinema
  • June 27, 2022
  • 288 Views
ವಿಕ್ರಾಂತ್ ರೋಣ ಚಿತ್ರ ಬಿಡುಗಡೆಗೆ ಶುಭಹಾರೈಸಿದ ಬಿಗ್ ಬಿ..

ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ವಿಕ್ರಾಂತ್ ರೋಣ ದರ್ಶನಕ್ಕೆ ದಿನಗಣನೆ ಶುರುವಾಗಿದೆ. ಕಿಚ್ಚನ ಚಿತ್ರದ ಟ್ರೈಲರ್ ಝಲಕ್ ನೋಡಿ ಬಿಗ್ ಸ್ಟಾರ್ಸ್ ಕೂಡ ಭೇಷ್ ಅಂತಿದ್ದಾರೆ. ಈಗ ಬಿಗ್ ಬಿ ಅಮಿತಾಭ್ ಬಚ್ಚನ್ ವಿಕ್ರಾಂತ್ ರೋಣ ಚಿತ್ರದ ಕನ್ನಡ ಟ್ರೈಲರ್ ಶೇರ್ ಮಾಡಿ ಶುಭ ಹಾರೈಸಿದ್ದಾರೆ.

ಕಿಚ್ಚ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರ ಫೀವರ್ ಜೋರಾಗಿದೆ. ಬಹುಭಾಷೆಗಳಲ್ಲಿ ಸಿನಿಮಾ 3ಡಿ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಖಡರ್ ಲುಕ್ ನಲ್ಲಿ  ಕಾಣಿಸಿಕೊಂಡಿರುವ ಸುಧೀಪ್ ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಈಗಾಗಲೇ ರಾ ರಾ ರಕ್ಕಮ್ಮ ಚಿತ್ರದ ಟ್ರೈಲರ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿ, ದಾಖಲೆ ಬರೆದಿದೆ, ಹೀಗಿರುವಾಗ ಈ ಚಿತ್ರಕ್ಕೆ ಬಿಗ್ಬಿ ಕೂಡ ಟ್ರೈಲರ್ ಶೇಋ್ ಮಾಡಿ , ಸಿನಿಮಾ ನೋಡಿ ಅಂತಾ ಟ್ವೀಟ್ ಮೂಲಕ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

ಕನ್ನಡ ಸ್ಟಾರ್ ಸುದೀಪ್, ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ 3ಡಿ ರೂಪದಲ್ಲಿ ಐದು ಭಾಷೆಗಳಲ್ಲಿ ಜುಲೈ 28ಕ್ಕೆ ತೆರೆಗೆ ಬರಲಿದೆ ಅಂತಾ ಟ್ವೀಟ್ ಮೂಲಕ ಚಿತ್ರತಂಡ ಬೆಂಬಲ ಸೂಚಿಸಿದ್ದಾರೆ. ಇನ್ನು ಪರಭಾಷೆಗಳಲ್ಲೂ ಉತ್ತಮ ಸ್ನೇಹಿರನ್ನು ಹೊಂದಿರುವ ಸುದೀಪ್ ಸಿನಿಮಾಗಾಗಿ ಇತರ ಚಿತ್ರರಂಗದ ಸ್ನೇಹಿತರು ಕೂಡ ಬೆಂಬಲಿಸಿ, ಶುಭಹಾರೈಸುತ್ತಿದ್ದಾರೆ. ಒಟ್ಟಿನಲ್ಲಿ ವಿಕ್ರಾಂತ್ ರೋಣ ಚಿತ್ರವನ್ನು ಕಣ್ತುತುಂಬಿಕೊಳ್ಳಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

 

Related