ಜಿಲ್ಲೆಯಲ್ಲಿ ಶಾಲೆ ಆರಂಭವಾಗುತ್ತಿದ್ದಂತೆ ವಿಘ್ನ

ಜಿಲ್ಲೆಯಲ್ಲಿ ಶಾಲೆ ಆರಂಭವಾಗುತ್ತಿದ್ದಂತೆ ವಿಘ್ನ

ಗದಗ : ಶಾಲೆ  ಆರಂಭವಾಗುತ್ತಿದ್ದಂತೆ  ಗದಗ ಜಿಲ್ಲೆಯಲ್ಲಿ ಮಕ್ಕಳು ಹೊಸ ಉತ್ಸಾಹದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ, ಜಿಲ್ಲೆಯ ಹತ್ತು ಶಿಕ್ಷಕರಿಗೆ ಕೊರೋನಾ ಪಾಸಿಟಿವ್  ದೃಢವಾಗಿದೆ.  ಹೀಗಾಗಿ ಜಿಲ್ಲೆಯ  ಐದು ಶಾಲೆಗಳು ಓಪನ್ ಆಗಿಲ್ಲಾ. ಗದಗ ನಗರದ ನಾಲ್ಕು ಹಾಗೂ ನರಗುಂದ ತಾಲೂಕಿನ ಜಗಾಪೂರ ಗ್ರಾಮದ ಪ್ರೌಢಶಾಲೆಯ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಹೀಗಾಗಿ ಶಾಲೆಗೆ ಬಂದ ಮಕ್ಕಳು ವಾಪಸ್ ಮನೆಗೆ ತೆರಳಿದ್ದಾರೆ. ಶಿಕ್ಷಣ ಇಲಾಖೆ ಐದು ಶಾಲೆಗಳಿಗೆ ಮತ್ತೊಮ್ಮೆ ಸ್ಯಾನಿಟೈಸರ್ ಮಾಡಲಾಗಿದೆ.

ಜಿಲ್ಲೆಯಾದ್ಯಂತ 6665 ಶಿಕ್ಷಕರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಈ ಪೈಕಿ 10 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಸದ್ಯ ಶಿಕ್ಷಕರು ಹೋಮ್ ಕ್ವಾರಂಟೈನ್ ಆಗಿದ್ದು, ಮುಂದೆ ಆರೋಗ್ಯ ಇಲಾಖೆಯ ಸಲಹೆ ಮೇರೆಗೆ, ಶಾಲೆ ಓಪನ್ ಮಾಡುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಗದಗ ಜಿಲ್ಲೆಯ ಡಿಡಿಪಿಐ ಬಸವಲಿಂಗಪ್ಪ ಹೇಳಿದರು.

ಕೊರೋನಾ ಆತಂಕದ ನಡುವೆ ಶಾಲೆ ಹಾಗೂ ಪಿಯುಸಿ ಕಾಲೇಜು ಆರಂಭವಾಗಿವೆ. ಮಕ್ಕಳು ಹಾಗೂ ಪೋಷಕರು ಕೊರೋನಾ ಭಯದಲ್ಲಿಯೇ ಶಾಲೆಗೆ ಆಗಮಿಸಿದ್ದಾರೆ. ಆದರೆ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಶಾಲೆ ಆರಂಭವಾಗುತ್ತಿದ್ದಂತೆ  ಶಿಕ್ಷಕರಿಗೆ ಕೊರೋನಾ ಬಂದಿರೋದು ಮಕ್ಕಳು ಹಾಗೂ ಪೋಷಕರ ಎದೆಯಲ್ಲಿ ಢವ ಢವ ಆರಂಭವಾಗಿದೆ. ಮುಂದೆ ಸರ್ಕಾರ ಯಾವ ನಿರ್ಧಾರ ಮಾಡ್ತಾರೆ ಕಾದು ನೋಡಬೇಕು.

Related