ವರುಣನ ಆರ್ಭಟ : ಬೆಳೆ ಹಾನಿ

ವರುಣನ ಆರ್ಭಟ : ಬೆಳೆ ಹಾನಿ

ಕಮಲನಗರ: ದಾಬಕಾ ಹೋಬಳಿ ಕೇಂದ್ರದ ಗಂಗನಬೀಡ್ ಅಕನಾಪೂರ, ಚಿಕ್ಲಿ ಗಣೇಶಪೂರ, ಮುಕ್ತಖೇಡ್, ಖೇರ್ಡಾ, ವಾಗನಗೇರಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸತತ ಸುರಿದ ಮಳೆಯಿಂದ ಸೋಯಾ ಬೆಳೆ ಕೈಗೆ ಬಾರದಂತಾಗಿದೆ.
ಕಳೆದ ಎರಡು ದಿನಗಳಲ್ಲಿ ಜೋರಾಗಿ ಮಳೆ, ಗಾಳಿಯ ರಭಸಕ್ಕೆ ಗಂಗನಬೀಡ್ ರೈತ ಅಂಗದ ಲಕ್ಷ್ಮಿಣರಾವ ಹಾಗೂ ಅಂಕುಶ ಅವರ ಜಮೀನಲ್ಲಿ ರಾಶಿ ಮಾಡಲು ಕೊಡಿ ಹಾಕಿರುವ ಸೋಯಾ ಬೀನ್ ಬೆಳೆಯು ಹರಿದು ನೀರು ಪಾಲಾಗಿದೆ ಎಂದು ಭಾರತ ಕೃಷಿಕ ಸಮಾಜದ ಔರಾದ ತಾಲೂಕು ಅಧ್ಯಕ್ಷ ಅಂಕುಶ ವಾಡೇಕರ ತಿಳಿಸಿದ್ದಾರೆ.

ವಾರದ ಹಿಂದೆ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಇನ್ನಿತರರ ಬೆಳೆಯನ್ನು ಮಳೆ ಅರ್ಭಟಕ್ಕೆ ಬೆಳೆ ಸಹಿತ ಫಲವದತ್ತ ಮಣ್ಣು ನೀರು ಪಾಲಾಗಿ ಬೆಳೆ ಬಾರದಂತಾಗಿದೆ. ಹಾಳಾದ ಬೆಳೆಯಿಂದ ರೈತ ಮೇಲೆಳುತ್ತಿರುವಾಗಲೇ ಇಂದಿನ ರೈತರ ಪರಿಸ್ಥಿತಿ ಚಿಂತಾಜಕ ಮಾಡಿದೆ.
ತಾಲೂಕಿನ ಠಾಣಾಕುಶನೂರ, ಮುಧೋಳ, ಸಾವಳಿ, ಹೋಳಸಮುದ್ರ, ಸೋನಾಳ, ಕೋಟಗ್ಯಾಳ, ಬೇಳಕುಣಿ, ಬಿಜಲಗಾಂವ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೇಮೋಸಮ ಮಳೆಯಿಂದ ಸೋಯಾ ಬೆಳೆಗೆ ರಾಶಿಗೆ ಅಡ್ಡಿಯಾಗಿ ಬೆಳೆ ಹಾನಿಯಾಗಿದೆ.

ಕಳೆದ ವರ್ಷ ಸೋಯಾ ಬೀನ್ ಬೆಳೆಗೆ ಸೂಕ್ತ ಬೆಲೆ ಸಿಗದೆ ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದ, ರೈತ ಮತ್ತೆ ನಷ್ಟದ ಕೂಪಕ್ಕೆ ಸಿಲುಕಿದ್ದಾರೆ.
2019ನೇ ಸಾಲಿನಲ್ಲಿ ರೈತರು ಬೆಳೆ ವಿಮೆ ಪಾವತಿ ಮಾಡಿದ್ದಾರೆ ಆದರೆ ಒಂದು ವರ್ಷ ಕಳೆದರೂ ಇದುವರಿಗೂ ವಿಮೆ ಕಂಪನಿಯಿಂದ ರೈತರ ಖಾತೆಗೆ ನಯಾ ಪೈಸಾ ಸಂದಾಯವಾಗಿಲಿಲ್ಲ. ಕೊಡಲೇ ಸಂಬಂಧಿತ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಕಮನಗರ ನಾಗರಿಕ ಸೇವಾ ಸಮಿತಿ ಮಾಜಿ ಅಧ್ಯಕ್ಷ ಉತ್ತಮರಾವ ಮಾನೆ ಆಗ್ರಹಿಸಿದ್ದಾರೆ.

Related