ವೈಕುಂಠ ಏಕಾದಶಿ: 1ಲಕ್ಷ ಲಡ್ಡು ವಿತರಣೆ

ವೈಕುಂಠ ಏಕಾದಶಿ: 1ಲಕ್ಷ ಲಡ್ಡು ವಿತರಣೆ

ಬಸವನಗುಡಿ: ಶ್ರೀ ಸಾಯಿ ಪಾರ್ಟಿ ಹಾಲ್ ನಲ್ಲಿ ಶರವಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ 10ನೇ ವೈಕುಂಠ ಏಕಾದಶಿ ಅಂಗವಾಗಿ ಭಕ್ತರಿಗೆ 1ಲಕ್ಷ ಲಡ್ಡು ವಿತರಣಾ ಕಾರ್ಯಕ್ರಮಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿಧಾನಪರಿಷತ್ ಶಾಸಕರಾದ, ಶರವಣ ಚಾರೀಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಟಿ.ಎ.ಶರವಣರವರು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಟಿ.ಎ.ಶರವಣ ರವರು ಮಾತನಾಡಿ, ವೈಕುಂಠ ಏಕಾದಶಿ ದಿನದಂದು ಮಹಾವಿಷ್ಣುವಿನ ವೈಕುಂಠ ಮಹಾದ್ವಾರ ತೆಗೆಯಾಗುತ್ತದೆ ಎಂದು ನಂಬಿಕೆ ಹಿಂದೂ ಧರ್ಮದಲ್ಲಿ ಇದೆ.

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಎಂಬ ಬಿರುದಾಂಕಿತ ವೈಕುಂಠ ಏಕಾದಶಿಯಂದು ಶ್ರೀ ವೆಂಕಟೇಶ್ವರ ದರ್ಶನ ಪಡೆಯಬೇಕು, ತಿರುಮಲ ತಿರುಪತಿಗೆ ಹೋಗಬೇಕು, ಲಡ್ಡು ಪ್ರಸಾದ ಸ್ವೀಕರಿಸಬೇಕು ಎಂಬ ಬಯಕೆ ಭಕ್ತಿ, ಎಲ್ಲರಿಗೂ ಇರುತ್ತದೆ. ಎಲ್ಲರು ತಿರುಪತಿಗೆ ಹೋಗಲು ಸಾಧ್ಯವಿಲ್ಲ, ಮತ್ತು ತಿರುಪತಿ ಲಡ್ಡು ಮಾದರಿಯಲ್ಲಿ 100ಬಾಣಸಿಗರ ಹಗಲುರಾತ್ರಿ ಏನ್ನದೇ 1ಲಕ್ಷ ಲಡ್ಡು ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ.

ಶುದ್ದ ತುಪ್ಪ, ಗೋಡಂಬಿ, ದಾಕ್ಷಿ,ಕಡಲೆಬೇಳೆ ಬಳಸಿ ತಿರುಪತಿಯ ಲಡ್ಡು ಮಾದರಿಯಲ್ಲಿ ತಯಾರಿಸಲಾಗಿದೆ. ಶ್ರೀ ವೆಂಕಟೇಶ್ವರ ದೇವಸ್ಥಾನಗಳಿಗೆ ಲಡ್ಡು ನೀಡಲಾಗುತ್ತದೆ. ಬಂದ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು. ತಿರುಪತಿ ತಿಮ್ಮಪ್ಪ, ಗೋವಿಂದ, ಹರೇ ಶ್ರೀನಿವಾಸ, ವೆಂಕಟೇಶ್ವರ, ಏಳು ಬೆಟ್ಟದ ಒಡೆಯ ಭಕ್ತರು ಅವರವರ ಭಕ್ತಿಭಾವನೆಗೆ ಸ್ಮರಣೆ ಮಾಡುತ್ತಾರೆ. ತಿರುಪತಿ ತಿಮ್ಮಪ್ಪ ನಂಬಿದ ಭಕ್ತರಿಗೆ ಎಂದು ಸಂಕಷ್ಟಗಳು ಬರುವುದಿಲ್ಲ.

ಇಂದು ಜನರು ಬಹಳ ಅತಂಕದಲ್ಲಿ ಇದ್ದಾರೆ ಕೊರೋನ ಎಂಬ ಮಹಾಮಾರಿ ಮತ್ತೇ ತನ್ನ ಆರ್ಭಟ ತೋರಿಸುತ್ತಿದೆ ಎಂಬ ವರದಿಗಳು ಬರುತ್ತಿದೆ. ಸಕಲ ಸಂಕಷ್ಟಗಳು ದೂರವಾಗಲಿ, ರೋಗರುಜಿನಗಳು ಮುಕ್ತವಾಗಲಿ ಮತ್ತು ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

Related