ಎಲ್ಲಾ ಮಕ್ಕಳಿಗೂ ಕಡ್ಡಾಯ ಪೋಲಿಯೋ ಲಸಿಕೆ ಹಾಕಿಸಿ

ಎಲ್ಲಾ ಮಕ್ಕಳಿಗೂ ಕಡ್ಡಾಯ ಪೋಲಿಯೋ ಲಸಿಕೆ ಹಾಕಿಸಿ

ಕೊರಟಗೆರೆ : 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತವನ್ನಾಗಿಸಲು ಮುಂದಾಗಬೇಕು ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಮಾತನಾಡಿದರು.

ತಾಲೂಕಿನ ಅಂಗನವಾಡಿ, ಆಸ್ಪತ್ರೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಯೋ ಲಸಿಕೆ ಹಾಕುತ್ತಲಿದ್ದು, ಒಂದು ವೇಳೆ ಲಸಿಕೆ ಹಾಕದ ಮಕ್ಕಳಿಗೆ ಅಂಗನವಾಡಿ, ಆಶಾ ಹಾಗೂ ಶ್ರೂಶ್ರೂಶಕಿಯರು ಪ್ರತಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ ಎಂದು ತಿಳಿಸಿದರು.

5 ವರ್ಷದೊಳಗಿನ 12198 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದಕ್ಕಾಗಿಯೇ ತಂಡಗಳನ್ನು ರಚಿಸಲಾಗಿದೆ. 284-ವ್ಯಾಕ್ಸಿನೇಟರ್, 13-ಮೇಲ್ವಿಚಾರಕರನ್ನೊಳಗೊಂಡು ಒಟ್ಟು 63 ಲಸಿಕಾ ಕೇಂದ್ರ ನೇಮಿಸಿ 4 ಬೂತ್ ಸ್ಥಾಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಇ.ಓಶಿವಪ್ರಸಾದ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಸತ್ಯನಾರಾಯಣ್, ಉಪಾಧ್ಯಕ್ಷೆ ಭಾರತಿ

ಸಿದ್ದಮಲ್ಲಪ್ಪ, ತಾ. ಆರೋಗ್ಯಾಧಿಕಾರಿ ವಿಜಯಕುಮಾರ್, ಮುಖ್ಯ ವೈದ್ಯಾಧಿಕಾರಿ ಪ್ರಕಾಶ್, ವೈದ್ಯರಾದ ನಾಗಭೂಷಣ್, ಷಣ್ಮುಗ ಪ್ರಿಯ, ವಿಜಯಲಕ್ಷ್ಮಿ, ಆರ್.ಬಿ.ಎಸ್.ಕೆ ತಂಡ ಸೇರಿ ಹಲವರು ಆರೋಗ್ಯ ಸಿಬ್ಬಂದಿ ಹಾಜರಿದ್ದರು.

Related