ಕೋವಿಡ್ ಲಸಿಕೆ ಪಡೆದ ವಸತಿ ಸಚಿವ ವಿ.ಸೋಮಣ್ಣ

ಕೋವಿಡ್ ಲಸಿಕೆ ಪಡೆದ ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು : ವಿಕ್ಟೋರಿಯ ಆಸ್ಪತ್ರೆಯಲ್ಲಿ ವಸತಿ ಸಚಿವ ವಿ. ಸೋಮಣ್ಣ ಕೊವಿಡ್ ಲಸಿಕೆ ಚುಚ್ಚಮದ್ದನ್ನು ತಜ್ಞ ವೈದ್ಯರುಗಳಿಂದ ಪಡೆದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿರವರು ನೀಡಿದ ಸಂದೇಶದಂತೆ 50 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಭಾರತ ದೇಶದಲ್ಲಿ ಪ್ರತಿಯೊಂದು ಹಳ್ಳಿ, ಹಳ್ಳಿಗಳಲ್ಲಿ ಲಸಿಕೆ ಹಾಕಲಾಗುತ್ತಿದೆ.

ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರು ಯಾವುದೇ ಅತಂಕ ಪಡದೇ ಲಸಿಕೆ ಪಡೆದುಕೊಳ್ಳಿ, ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.

ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಇದ್ದರಿಂದ ರೋಗ ಒಬ್ಬರಿಂದ ಇನ್ನೂಬ್ಬರಿ ಹರಡುವುದಿಲ್ಲ.

ಈ ಸಂದರ್ಭದಲ್ಲಿ ವಿಕ್ಟೋರಿಯ ಆಸ್ಪತ್ರೆಯ ಸೂಪರಿಡೆಂಟ್ ಡಾ. ರಮೇಶ್ ಕೃಷ್ಣ, ಗೋವಿಂದರಾಜ ನಗರ, ಬಿಜೆಪಿ ಮಂಡಲದ ಅಧ್ಯಕ್ಷರಾದ ವಿಶ್ವನಾಥಗೌಡರು ಉಪಸ್ಥಿತರಿದ್ದರು.

Related