‘ರೈತ ವಿದ್ಯಾನಿಧಿ ಯೋಜನೆ ಸದುಪಯೋಗ ಪಡೆದುಕೊಳ್ಳಿ’

‘ರೈತ ವಿದ್ಯಾನಿಧಿ ಯೋಜನೆ ಸದುಪಯೋಗ ಪಡೆದುಕೊಳ್ಳಿ’

ಹಟ್ಟಿ ಚಿನ್ನದ ಗಣಿ: ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ ಸಲುವಾಗಿ, ರಾಜ್ಯ ಸರ್ಕಾರ ಹೊಸ ಶಿಷ್ಯ ವೇತನ ಯೋಜನೆ ರೈತ ವಿದ್ಯಾನಿಧಿಯನ್ನು ಜಾರಿಗೊಳಿಸಿದ್ದು, ರೈತರಿಗೆ ಲೋಕಾರ್ಪಣೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ಸಮೀಪದ ಗುರುಗುಂಟಾ ರೈತ ಸಂಪರ್ಕ ಕೇಂದ್ರದಲ್ಲಿ ಅವಕಾಶ ಮಾಡಿಕೊಡಲಾಗಿತ್ತು.

ಈ ವೇಳೆ ಗುರುಗುಂಟಾ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ, ಕೃಷಿ ಅಧಿಕಾರಿ ಶಿವರಾಜ ಯಲಗಲದಿನ್ನಿ ಸರ್ಕಾರದ ಆದೇಶದಂತೆ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯಕ್ರಮದ ನೇರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲು ಶಿಷ್ಯ ವೇತನ ನೀಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗೌಡೂರು, ಕೋಠಾ, ಪೈದೊಡ್ಡಿ, ಗೆಜ್ಜಲಗಟ್ಟಾ, ನಿಲೋಗಲ್, ಹಟ್ಟಿ, ಟಣಮಕಲ್, ಹಾಗೂ ಹೋಬಳಿ ವ್ಯಾಪ್ತಿಯ ರೈತರ 300 ಕ್ಕೂ ಹೆಚ್ಚು ರೈತ ಮುಖಂಡರು ಹಾಗೂ ರೈತರ ಅವರ ಮಕ್ಕಳು ಭಾಗವಯಿಸಿದರು.
10ನೇ ತರಗತಿ ನಂತರ ಪಿಯುಸಿ, ಸ್ನಾತಕೋತ್ತರ ಪದವಿವರೆಗೆ ರೈತರ ಮಕ್ಕಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಪಿಯುಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ. 2500, ಬಿಎ,ಬಿಕಾಂ,ಬಿಎಸ್ ರೂ. 3000, ಪದವಿ ರೂ. 5000, ವೃತ್ತಿಪರ ಕೋರ್ಸಗಳಾದ ಎಲ್‌ಎಲ್‌ಬಿ. ಪ್ಯಾರಾಮೇಡಿಕಲ್, ನರ್ಸೀಂಗ್ ರೂ.5500, ವಿವಿಧ ಕೋರ್ಸಗಳ ವಿದ್ಯಾರ್ಥಿಗಳಿಗೆ ರೂ. 7500 ರೂ. 8000 ಸ್ನಾತಕೋತ್ತರ ಕೋರ್ಸ್, ವಿದ್ಯಾರ್ಥಿನಿಯರಿಗೆ ರೂ. 10000 ರಿಂದ 11000 ವರೆಗೆ ಕಾಲರ್‌ಶಿಪ್ ನೀಡಲಾಗುತ್ತದೆ. ಸರ್ಕಾರದ ಮಹತ್ವಾಕಾಂಕ್ಷೀಯ ಯೋಜನೆ ಇದಾಗಿದ್ದು ಪ್ರತಿಯೊಬ್ಬ ರೈತರ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಹನುಮಂತಪ್ಪ ರಾಠೋಡ್ ಕೃಷಿ ಅಧಿಕಾರಿ, ಜ್ಯೋತಿ.ಟಿ. ಸಹಾಯಕ ಕೃಷಿ ಅಧಿಕಾರಿ, ಮೌನೇಶ ಸಹಾಕಯ ಲೆಕ್ಕಿಗ, ಗ್ರಾಮದ ರೈತರು ಮತ್ತು ಮಕ್ಕಳು ಇದ್ದರು.

Related