ವಿಧಾನಸಭೆ ನೂತನ ಸ್ಪೀಕರ್ ಆಗಿ ಯುಟಿ ಖಾದರ್

ವಿಧಾನಸಭೆ ನೂತನ ಸ್ಪೀಕರ್ ಆಗಿ ಯುಟಿ ಖಾದರ್

ಬೆಂಗಳೂರು: ಕರ್ನಾಟಕ ರಾಜ್ಯದ ಮಂಗಳೂರು ಉಡುಪಿ ಜಿಲ್ಲೆಗಳಲ್ಲಿ ಪದೇ ಪದೇ ಕೋಮು ಗಲಾಟೆಗಳು  ನಡೆಯುತ್ತಿದ್ದರೂ ಸಹ ಸತತವಾಗಿ ಐದು ಬಾರಿ ಶಾಸಕರಾಗಿ ಯುಟಿ ಖಾದಿರ್ ರವರು ಗೆಲ್ಲುತ್ತಾ ಬಂದಿದ್ದಾರೆ.

ಹೌದು, ಕರ್ನಾಟಕ ವಿಧಾನಸಭೆಯ ನೂತನ ಸ್ವೀಕರ್ ಆಗಿ ಯುಟಿ ಖಾದರ್ ಅವರು ಸರ್ವಾನುಮತದಿಂದ ಇಂದು( ಬುಧವಾರ) ಆಯ್ಕೆಯಾಗಿದ್ದಾರೆ. ಕರಾವಳಿ ಕರ್ನಾಟಕ ಭಾಗದಲ್ಲಿ ಮೃದು ಸ್ವಭಾವದ, ಸೌಹಾರ್ದಯುತ ಹಾಗೂ ಕೋಮು ರಾಜಕಾರಣದ ವಿರುದ್ಧ ಅದಮ್ಯ ದನಿಯೆತ್ತಿರುವ ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ಕರಾವಳಿ ಕರ್ನಾಟಕದ ಹಿಂದುತ್ವದ ಗೂಡುಗಳಲ್ಲಿ ಕಾಂಗ್ರೆಸ್ ಕೋಟೆ ಕಟ್ಟಿದ್ದಾರೆ.

ಇದಕ್ಕೆ ಪೂಕರವೆಂಬಂತೆ ಮಂಗಳೂರಿನಲ್ಲಿ ಎಷ್ಟೇ ಕೋಮು ರಾಜಕಾರಣ ಗಲಾಟೆಗಳು ನಡೆದರೂ ಸಹ ಖಾದರ್​ ಸತತವಾಗಿ ಬರೋಬ್ಬರಿ ಐದು ಬಾರಿ ಶಾಸಕರಾಗಿ ಗೆಲ್ಲುತ್ತಾ ಬಂದಿದ್ದಾರೆ. ಇನ್ನು ಕೋಮು ಸೌಹಾರ್ದತೆಗೆ ಮತ್ತೊಂದು ಹೆಸರು ಯು.ಟಿ.ಖಾದರ್​.

ಇನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವ ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಹಿರಿಯ ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅವರ  ಬೆಂಬಲಿಗರು ಈಗ ನಿರಾಶೆಗೊಂಡಿದ್ದಾರೆ. ಖಾದರ್ ಅವರನ್ನು ಸಚಿವರನ್ನಾಗಿ ಮಾಡಿದ್ದರೆ 13ರಲ್ಲಿ 2 ಸ್ಥಾನ ಗಳಿಸಿರುವ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪಕ್ಷದ ಪುನಶ್ಚೇತನಕ್ಕೆ ಸಹಕಾರಿಯಾಗುತ್ತಿತ್ತು.

 

Related