ಸುಳ್ಳು ಸುದ್ದಿ ಕೇಳಿ ಉರ್ಫಿ ಜಾವೇದ್ ಕೆಂಡಾಮಂಡಲ

  • In Video
  • July 7, 2022
  • 650 Views
ಸುಳ್ಳು ಸುದ್ದಿ ಕೇಳಿ ಉರ್ಫಿ ಜಾವೇದ್ ಕೆಂಡಾಮಂಡಲ

ದಿನನಿತ್ಯ ಚಿತ್ರ ವಿಚಿತ್ರ ಕಾಸ್ಟ್ಯೂಮ್ ಧರಿಸಿ, ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುವ ರಿಯಾಲಿಟಿ ಶೋ ಖ್ಯಾತಿಯ ಉರ್ಫಿ ಜಾವೇದ್ ನಿಧನ ಹೊಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಹರಿಬಿಡಲಾಗಿತ್ತು. ಎದ್ರು, ಬಿದ್ರೂ ಕ್ಯಾಮೆರಾ ಮುಂದೆ ಓಡಿ ಬರೋ ಉರ್ಫಿಗೆ ಏನಾಯಿತು ಎಂದು ಅಭಿಮಾನಿಗಳು

ಆತಂಕಗೊಂಡಿದ್ದರು. ಆದರೆ ಇದು ಕೇವಲ ಗಾಳಿ ಸುದ್ದಿ ಎಂದು ಗೊತ್ತಾದ ಮೇಲೆ ಆಕೆಯ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಉರ್ಫಿ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಡಿರುವುದು ಗೊತ್ತಾಗಿದ್ದೇ ತಡ ಉರ್ಫಿ ಕೆಂಡಾಮಂಡಲವಾಗಿದ್ದಾರೆ. ಇಂತಹ ಸುದ್ದಿಯನ್ನು ಹರಿಬಿಟ್ಟವರ ವಿರುದ್ಧ ಸಮರವೇ ಸಾರಿದ್ದು, ಅವರನ್ನು ಹುಡುಕುತ್ತಿರುವುದಾಗಿ ಮತ್ತು ಅವರ ವಿರುದ್ಧ ಕಾನೂನು ಕ್ರಮವನ್ನೂ ತಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೇ, ನನಗೇನೂ ಆಗಿಲ್ಲ ನಾನು ಆರಾಮಾಗಿ ಇದ್ದೇನೆ. ಅಭಿಮಾನಿಗಳು ಆತಂಕ ಪಡುವಂಥದ್ದು ಏನೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಿಯಾಲಿಟಿ ಶೋ ಮೂಲಕ ಹೆಸರು ಮಾಡಿದ್ದ ಉರ್ಫಿ ಬಳಿಕ ತಮ್ಮ ಕಾಸ್ಟ್ಯೂಮ್ ನಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದವರು. ಆಕೆ ದಿನಕ್ಕೊಂದರಂತೆ ಧರಿಸುವ ಕಾಸ್ಟ್ಯೂಮ್ ನೋಡಿ ಪಡ್ಡೆ ಹುಡುಗರು ಚಳಿಯಲ್ಲೂ ಬೆವರಿಳಿಸುತ್ತಿದ್ದಾರೆ. ಉರ್ಫಿ ಸ್ಟಾರ್ ನಟರಿಗಿಂತಲೂ ಹೆಚ್ಚಿನ ಫಾಲೋವರ್ಸ್ ಸೋಷಿಯಲ್ ಮೀಡಿಯಾದಲ್ಲಿ ಹೊಂದಿದ್ದಾರೆ. ಇದೇ ಕಾರಣಕ್ಕೆ ಉರ್ಫಿಯ ಬಗ್ಗೆ ಇಲ್ಲ ಸಲ್ಲದ್ದು ಹೇಳುತ್ತಿರ ಬಹುದು ಎನ್ನಲಾಗ್ತಿದೆ.

Related