“ಯುನೈಟ್ ಮೋಟಾರ್ ರೇಸ್”

“ಯುನೈಟ್ ಮೋಟಾರ್ ರೇಸ್”

ಮಹದೇವಪುರ:- ಕ್ಷೇತ್ರದ ವರ್ತೂರು ವಾರ್ಡ್ ನ ಗುಂಜೂರು – ಬಳಗೆರೆ ರಸ್ತೆಯಲ್ಲಿರುವ ಸ್ಥಳೀಯ ನಿವಾಸಿಗಳಿಗೆ ಯುನೈಟ್ ಆಫ್ ರೋಡ್ ಕಾರ್ ಮೋಟಾರ್ ರೇಸ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕೋಲಾರ ಜಿಲ್ಲಾ ಪ್ರಭಾರಿ , ರಾಜ್ಯ ಕಾರ್ಯಕಾರಿಣಿ ಸದಸ್ಯ ಜಯಚಂದ್ರರೆಡ್ಡಿ ಮಂಗಳವಾರ ತಿಳಿಸಿದರು.
ಯುನೈಟ್ ಮೋಟಾರ್ ರೇಸ್ ಮತ್ತು ಚೇತನ್ ಶಿವರಾಂ ಮೋಟಾರ್ ರೇಸ್ ಸಹಭಾಗಿತ್ವದಲ್ಲಿ ಆಟೋಕ್ರಾಸ್ ಫಾಸ್ಟೆಟ್ ಡ್ರೈವರ್ಸ್ ಎಂಬ ಸ್ಪರ್ಧೆಯ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ವಿಶೇಷವಾಗಿ ಕಾರು ಚಾಲನೆಯಲ್ಲಿ ಸಾಧನೆ ಮಾಡಿದ ಸಾಧಕರಿಂದ ವೇಗದ ಮೋಟಾರ್ ರೇಸ್ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ರಾಜ್ಯದ ಮೈಸೂರು, ಚಿಕ್ಕಮಗಳೂರು, ಬೆಂಗಳೂರು ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಭಾಗಹಿಸಿದ್ದರು.
ಮೊದಲನೇ ದಿನದ ಸ್ಪರ್ಧೆಯಲ್ಲಿ ಪ್ರಗತಿ ಗೌಡ ಎಂಬ ಯುವತಿ ಭಾರತದ ಮೋಟಾರ್ ರೇಸ್ ಸ್ಪರ್ಧೆಯಲ್ಲೇ ಮೊಟ್ಟ ಮೊದಲನೆಯ ಬಾರಿಗೆ ವೇಗದ ಚಾಲಕಿ ಪ್ರಶಸ್ತಿ ಪಡೆದಿದ್ದು, ಎರಡನೇ ದಿನದ ಸ್ಪರ್ಧೆಯಲ್ಲಿ ತರುಣ್ ರೆಡ್ಡಿ ಯುವಕ ವೇಗದ ಚಾಲಕ ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಯುನೈಟ್ ರೇಸ್ ಮುಖ್ಯಸ್ಥ ನಿಖಿಲ್, ಕ್ಷೇತ್ರದ ಅಧ್ಯಕ್ಷ ಮನೋಹರ್ ರೆಡ್ಡಿ, ಮುಖಂಡರಾದ ರಾಜಾರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ಚನ್ನಸಂದ್ರ ಚಂದ್ರಶೇಖರ್ ಸೇರಿದಂತೆ ಇತರರು ಹಾಜರಿದ್ದರು.

Related