ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ದೇವದುರ್ಗ : ತಾಲೂಕಿನಲ್ಲಿ ನಡೆದ ಎರಡನೇ ಹಂತದ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಮುಂಡರಗಿ ಗ್ರಾಮ ಪಂಚಾಯತ ಅಧ್ಯಕ್ಷ ಎಸ್ಸಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀಮತಿ ಮಲ್ಲಮ್ಮ ಗಂಡ ಶಿವಪ್ಪ ಮುಂಡರಗಿ , ಉಪಾಧ್ಯಕ್ಷ ಮಹಿಳೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಶ್ರೀಮತಿ ದೇವಮ್ಮ ಗಂಡ ಸಣ್ಣ ಹನುಮಂತ ಗಣಜಿಲಿ ಇವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಚಂದ್ರಶೇಖರ್ ಅವರು ಚುನಾವಣಾ ಫಲಿತಾಂಶ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ಮುಂಡರಗಿ, ಉಪಾಧ್ಯಕ್ಷರಾದ ದೇವಮ್ಮ ಗಣಜಲಿ, ಸದಸ್ಯರು ಹನುಮಂತಯ ಗಣಜಲಿ, ಮಲ್ಲಣ್ಣ ಮುಂಡರಗಿ, ಸಾಬಣ್ಣ ಮುಂಡರಿಗಿ, ಶಶಿಕುಮಾರ್ ದೇವತಗಲ್ಲ್, ಕಾಶಿಂ ಅಲಿ ಕಾಟಮಳ್ಳಿ, ಬಸವರಾಜ ಹುಲೇಗುಡ್ಡ, ಅನ್ನಪೂರ್ಣ ಮುಂಡರಗಿ, ಲಕ್ಷ್ಮಿ ಹುಲೇಗುಡ್ಡ, ಶ್ರೀಮತಿ ಮಲ್ಲಮ್ಮ ಗಣಜಲಿ, ಕಾಂಗ್ರೆಸ್ ಪಕ್ಷದ ಅರಕೇರ ಬ್ಲಾಕ್ ಅಧ್ಯಕ್ಷರಾದ ಆದನಗೌಡ ಬುಕ್ಕಲದೊಡ್ಡಿ, ವೀರೇಶ್ ಗೌಡ ಗಣೇಕಲ್, ಶಿವರಾಜಪ್ಪ ಗೌಡ ದೇವತಗಲ್, ಮಾನಪ್ಪ ಮೇಸ್ತ್ರಿ, ಸೋಮಯ್ಯಗೌಡ ಮುಂಡರಗಿ, ಮಾಜಿ ಗ್ರಾ.ಪಂ ಸದಸ್ಯ ಶಿವರಾಜ್, ಮಲ್ಲಯ್ಯ ಕಟ್ಟಿಮನಿ, ಶಿವರಾಯ ಅಕ್ಕರಕಿ, ನರಸಣ್ಣನಾಯಕ ಗಣಜಿಲಿ, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳ ಜನರು ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.

Related