ನಾಮಪತ್ರ ಸಲ್ಲಿಸಿದ ಉಮೇಶ್ ಜಾಧವ್

ನಾಮಪತ್ರ ಸಲ್ಲಿಸಿದ ಉಮೇಶ್ ಜಾಧವ್

ಕಲಬುರಗಿ; ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ್ ಜಾಧವ್ ಅವರು ಇಂದು ಕಲಬುರ್ಗಿಯಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಕಳೆದ ಬಾರಿಯೂ ಕೂಡ ಸಂಸದರಾಗಿ ಆಯ್ಕೆಗೊಂಡ ಉಮೇಶ್ ಜಾದವ್ ಅವರು ಈ ಬಾರಿಯೂ ಕೂಡ ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿನ ನಗೆಯನ್ನು ಬೀರಲು ಸಜ್ಜಾಗಿದ್ದಾರೆ.

ಇನ್ನು ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಉಮೇಶ್ ಜಾದವ್ ಅವರಿಗೆ ರೋಡ್ ಶೋನಲ್ಲಿ ಸಾತ್ ನೀಡಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಭರ್ಜರಿ ರೋಡ್ ಶೋ ಮಾಡುವ ಮೂಲಕ ಕೇಸರಿ ಪಡೆಯ ಶಕ್ತಿ ಪ್ರದರ್ಶನ ನಡೆಯಿತು. ನಗರೇಶ್ವರ ಶಾಲಾ ಮೈದಾನ ದಿಂದ ಶುರುವಾದ ರೋಡ್ ಶೋ ನಲ್ಲಿ ಸಾವಿರಾರು ಕಾರ್ಯಕರ್ತರು ಹಾಜರಿದ್ದು ಸಂಸದ ಉಮೇಶ್ ಜಾಧವ್ ಜೊತೆ ನಾವಿದ್ದೀವಿ ಅಂತ ತೋರಿಸಿಕೊಟ್ರು.

Related