ಮೇ 2ರಿಂದ ಯುಜಿಸಿ-ನೆಟ್ ಪರೀಕ್ಷೆ

ಮೇ 2ರಿಂದ ಯುಜಿಸಿ-ನೆಟ್ ಪರೀಕ್ಷೆ

ನವದೆಹಲಿ : ಯುಜಿಸಿಯಿಂದ ನೆಟ್ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ. ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್), ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪರೀಕ್ಷೆ ಮೇ ತಿಂಗಳಲ್ಲಿ ನಡೆಯಲಿದೆ.

ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ಟ್ವೀಟ್ ಮಾಡಿದ್ದು, ಈ ವರ್ಷ ಯುಜಿಸಿ ನೆಟ್ ಪರೀಕ್ಷೆ ಮೇ 2ರಿಂದ ಆರಂಭವಾಗಲಿದೆ. ಯುಜಿಸಿ ನೆಟ್ ಅರ್ಹತಾ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಬಹುದು ಎಂದಿದ್ದಾರೆ.

Related