ವಿಮಾನ ಚಕ್ರ ಹಿಡಿದು ನೇತಾಡುತ್ತಿದ್ದ ಇಬ್ಬರು ಸಾವು

ವಿಮಾನ ಚಕ್ರ ಹಿಡಿದು ನೇತಾಡುತ್ತಿದ್ದ ಇಬ್ಬರು ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ತಮ್ಮ ಹಿಡಿತ ಸಾಧಿಸಿದ ಬೆನ್ನಲ್ಲೇ ಜನರು ಭೀತಿಗೊಳಗಾಗಿ ದೇಶದಿಂದ ಪಲಾಯನಗೈಯಲು ಮುಂದಾಗಿದ್ದಾರೆ. ಈ ಹಿನ್ನಲೆ ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು, ಕಾಬೂಲ್ ನಿಂದ ಹೊರಟಿದ್ದ ವಿಮಾನದ ಚಕ್ರವನ್ನು ಹಿಡಿದು ನೇತಾಡುತ್ತಿದ್ದ ಇಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಟೆಹ್ರಾನ್ ಟೈಮ್ಸ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ, ಕಾಬೂಲ್ ನಿಂದ ಹೊರಟಿದ್ದ ವಿಮಾನದ ಚಕ್ರ ಹಿಡಿದು ಇಬ್ಬರು ವ್ಯಕ್ತಿಗಳು ಜೋತಾಡುತ್ತಿದ್ದರು, ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿಯೇ ಇಬ್ಬರೂ ಕೆಳಕ್ಕೆ ಬೀಳುತ್ತಿರುವ ಭಯಾನಕ ದೃಶ್ಯ ಸೆರೆಯಾಗಿದೆ.

Related