ತುಮಕೂರು ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾಗುತ್ತದೆ: ಡಿಸಿಎಂ

ತುಮಕೂರು ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾಗುತ್ತದೆ: ಡಿಸಿಎಂ

ತುಮಕೂರು: ತುಮಕೂರು ಜಿಲ್ಲೆ ನಮ್ಮ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಹೊಂದಿದೆ. ಇಲ್ಲಿರುವ ನೆಲ, ಜಲ, ಗಾಳಿ ಎಲ್ಲದಕ್ಕೂ ಒಂದು ವಿಶೇಷವಾದ ಸ್ಥಾನಮಾನ ಇದೆ. ಹಾಗಾಗಿ ಮುಂಬರುವ ದಿನಗಳಲ್ಲಿ ರಾಜ್ಯದ ರಾಜಧಾನಿ ತುಮಕೂರು ಕೂಡ ಅಭಿವೃದ್ಧಿಯಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಇಂದು ತುಮಕೂರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಂತೆ ತುಮಕೂರು ನಗರವನ್ನು ನಾವು ಸ್ಮಾರ್ಟ್ ಸಿಟಿ ಆಗಿ ನಿರ್ಮಾಣ ಮಾಡಬೇಕೆಂದು ಹೇಳಿದರು.

ಮುಂದಿನ 50 ವರ್ಷದಲ್ಲಿ ಹೊಸ ಬೆಂಗಳೂರು ನಿರ್ಮಾಣದ ತಯಾರಿ ಮಾಡಬೇಕು. ಬೆಂಗಳೂರು ಬೆಳಸಲು ಬಂದಾಗ ರಾಮನಗರ, ಚನ್ನಪಟ್ಟಣ, ನೆಲಮಂಗಲ ಆದ ಮೇಲೆ ತುಮಕೂರನ್ನೇ ನೋಡಬೇಕು ಎಂದು ತಿಳಿಸಿದರು.

 

Related