ಸಂಭ್ರಮದಿಂದ ನಡೆದ ತುಳಸಿ ಪೂಜೆ

ಸಂಭ್ರಮದಿಂದ ನಡೆದ ತುಳಸಿ ಪೂಜೆ

ಗಜೇಂದ್ರಗಡ : ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಪೂಜಿಸಿ ನಮಸ್ಕರಿಸುವುದರಿಂದ ವಿಶೇಷ ಫಲ ದೊರೆಯುತ್ತದೆ. ಈ ಹಿನ್ನೆಲೆ ಸಾರ್ವಜನಿಕರು ತಮ್ಮ ಮನೆಯಂಗಳದಲ್ಲಿನ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವ ಮೂಲಕ ಸಕಲ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ದೀಪಾವಳಿ ನಂತರ ಆಗಮಿಸುವ ತುಳಸಿ ಲಗ್ನ ಪ್ರತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ತುಳಸಿ ಪೂಜೆ ಮಾಡುವುದರಿಂದ ಎಲ್ಲ ಕಷ್ಟಗಳು ಪರಿಹಾರವಾಗುತ್ತದೆ. ಪುಣ್ಯ  ಪ್ರಾಪ್ತಿಯಾಗುತ್ತದೆ  ಎಂಬ  ಭಾವನೆ  ಭಕ್ತರಲ್ಲಿದೆ.  ತುಳಸಿ  ವಿವಾಹ  ಹಿನ್ನೆಲೆ ಪೂಜಾ-ಸಾಮಗ್ರಿ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ  ಸಾರ್ವಜನಿಕರು  ಮಾರುಕಟ್ಟೆಗೆ  ಆಗಮಿಸಿದ್ದರಿಂದ  ಜನಜಂಗುಳಿಯಿಂದ  ತುಂಬಿತ್ತು.

ನಾವೂ ಪ್ರತಿವರ್ಷ ಕೂಡಾ ತುಳಸಿ ವಿವಾಹ ನಡೆಸಿಕೊಂಡು ಬಂದಿದ್ದೇವೆ. ನಮ್ಮ ಅಕ್ಕಪಕ್ಕದ ಮನೆಯ ಹೆಂಗಳೆಯರು, ಕನ್ಯೆಯರನ್ನು ಕರೆಸಿ ಸಂಭ್ರಮದಿಂದ ಆಚರಣೆ ಮಾಡುತ್ತೇವೆ ಎಂದು ರೇಣುಕಾ ಗೌಡರ ಹೇಳಿದರು.

Related