ಕ್ಲಾಕ್ ಟವರ್ ಮೇಲೆ ಹಾರಿದ ತ್ರಿರಂಗ ಧ್ವಜ

  • In State
  • January 31, 2024
  • 89 Views
ಕ್ಲಾಕ್ ಟವರ್ ಮೇಲೆ ಹಾರಿದ ತ್ರಿರಂಗ ಧ್ವಜ

ಕೋಲಾರ: ಕೋಲಾರ ನಗರದಲ್ಲಿರುವಂತಹ ಕ್ಲಾಕ್ ಟವರ್ ಮೇಲೆ ಈ ಹಿಂದೆ ಮುಸ್ಲಿಂ ಸಮುದಾಯದವರು, ಮುಸ್ಲಿಂ ಸಮುದಾಯದ ಧ್ವಜವನ್ನು ಹಾರಿಸಬೇಕೆಂದು ಪ್ರಯತ್ನಪಟ್ಟಿದ್ದರು ಅದಾದ ಬಳಿಕ ಈಗ ಮತ್ತೆ ಕೋಲಾರ ನಗರದಲ್ಲಿ ಹಿಂದೂ ಸಮುದಾಯದ ಕ್ಲಾಕ್ ಟವರ್ ಮೇಲೆ ಹನುಮಾನ್ ಧ್ವಜ ಹಾರಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ ಇದೆಲ್ಲದಕ್ಕೂ ಬ್ರೇಕ್ ಹಾಕಿ ಜಿಲ್ಲಾಡಳಿತ ರಾಷ್ಟ್ರಧ್ವಜ ಹಾರಿಸಿದೆ.

ಹೌದು, ಧಾರ್ಮಿಕ ಮನಸ್ತಾಪ, ಗಲಾಟೆ, ದಳ್ಳುರಿ ಆರಂಭವಾಗಬಹುದಾದ ಸಂಗತಿಯನ್ನು ಮನಗಂಡ ಜಿಲ್ಲಾಡಳಿತ ಕೂಡಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಕ್ಲಾಕ್ ಟಾವರ್ ಮೇಲೆ ತಿರಂಗವನ್ನು ಹಾರಿಸಿದ್ದಾರೆ.

Related