ದಿಢೀರ್ ಬಂದಗೆ ಪ್ರಯಾಣಿಕರ ಪರದಾಟ

ದಿಢೀರ್ ಬಂದಗೆ ಪ್ರಯಾಣಿಕರ ಪರದಾಟ

ಗಜೇಂದ್ರಗಡ  ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಚಾಲಕರು, ನಿರ್ವಾಹಕರು, ಕಾರ್ಮಿಕ ವಲಯದ ಎಲ್ಲಾ ನೌಕರರು ಯಾವೂದೇ ಬಸ್ ರಸ್ತೆಗೆ ಇಳಿಯದೆ ಧರಣಿ ನಡೆಸುತ್ತಿದ್ದಾರೆ.
ಬಸ್ ಬಂದ ಹಿನ್ನಲೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಗಜೇಂದ್ರಗಡದಿಂದ  ಬೇರೆ ಬೇರೆ ಕಡೆ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಬಂದ್ಗೆ ಬಿಸಿ ಪ್ರಯಾಣಿಕರಿಗೂ ತಟ್ಟಿದೆ.

ಈ ವೇಳೆ ಮಾತನಾಡಿದ ಅವರು, ಎ.ಬಿ ತಹಶೀಲ್ದಾರ ನಾವೆಲ್ಲರೂ ಹಲವಾರು ದಶಕಗಳಿಂದ ಈ ಸಂಸ್ಥೆಗೆ ದುಡಿದಿದ್ದೇವೆ. ಯಡಿಯೂರಪ್ಪನವರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವುದಾಗಿ ಭರವಸೆ ನೀಡಿದರು.

ನಮ್ಮ ಮನವಿಯನ್ನು ನೀಡಲು ಹೋದ ನಮ್ಮ ಸಹಪಾಠಿಗಳಿಗೆ ಪೋಲಿಸ್ ವಶಕ್ಕೆ ಕಳುಹಿಸಿದ್ದು ವಿಷಾದನೀಯವಾಗಿದೆ. ಸರ್ಕಾರ ತಕ್ಷಣವೇ ನಮ್ಮ ಮನವಿಗೆ ಸ್ಪಂದಿಸಿದೇ ಇದ್ದಲೇ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ನರಸಿಂಹರಾವ್ ಘೋಪ9ಡೆ, ಎ.ಬಿ ತಹಶೀಲ್ದಾರ್, ಎಸ್. ಆರ್ ಜುಜಾರೆ, ಪಿ.ಎಸ್ ಗುಜಮಾಗಡಿ, ಡಿ.ಎಲ್ ರಾಠೋಡ, ಪರಶುರಾಮ ರಾಯಬಾಗಿ, ಎಸ್.ಡಿ ಮಳ್ಳೂರ, ಲಕ್ಷಣ ಇಟಗಿ, ಆರ್. ಜಿ.ಕುಲಕರ್ಣಿ, ರಾಜು ರಾಠೋಡ, ಡಿ.ಕೆ ಮಾಲ್ದಾರ, ಅಂಬುಲಾಲ್ ಭಾಂಡಗೆ ಹಲವರು ಸೇರಿದ್ದರು.

Related