ನಿಂಗದಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಭಾಗ್ಯ

ನಿಂಗದಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಭಾಗ್ಯ

ಕಮಲನಗರ: ತಾಲ್ಲೂಕಿನ ಲಿಂಗದಳ್ಳಿ ಗ್ರಾಮಕ್ಕೆ ಸಾರಿಗೆ ಇಲಾಖೆಯ ಆರು ದಶಕಗಳ ನಂತರ ಬಸ್ ಕಂಡು ಗ್ರಾಮಸ್ಥರು ಖುಷಿಪಟ್ಟರು. ಗ್ರಾಮಸ್ಥರು, ಮುಖಂಡರು ಬಸ್ಸಿಗೆ ತೋರಣ ಕಟ್ಟಿ, ಹೂವಿನಹಾರ ಹಾಕಿ ಸಮಾಜಸೇವಕರಾದ ಆತ್ಮಾರಾಮ್ ಬಿರಾದಾರ್ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು ನಿಂಗದಳ್ಳಿ ಗ್ರಾಮಕ್ಕೆ ಭಾರತ ದೇಶ ಸ್ವಾತಂತ್ರ ದಿಂದ ಇಲ್ಲಿವರೆಗೆ ಗ್ರಾಮದ ಜನರು ಸಾರಿಗೆ ಬಸ್ ಕಂಡಿರಲಿಲ್ಲ. ಔರಾದ ಉದಗೀರಕ್ಕೆ ಹೋಗಬೇಕೆಂದರೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಬೇಕೆಂದರೆ ಕಾಲ್ನಡಿಗೆಯಿಂದ ಮುಧೋಳ ವರೆಗೆ ಬಂದು ಬಸ್ಸು ಸಂಚಾರ ಮಾಡುವ ಪರಿಸ್ಥಿತಿ ಇತ್ತು. ಔರಾದ ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಿದ ಕೂಡಲೇ ಗುರುವಾರ ಮುಂಜಾನೆ ಒಂಬತ್ತು ಗಂಟೆಗೆ ನಿಂಗದಳ್ಳಿ ದಿಂದ ಔರಾದ ಹಾಗೂ ಸಾಯಂಕಾಲ ಔರಾದ ದಿಂದ ನಿಂಗದಳ್ಳಿಗೆ ಸಂಚರಿಸಲು ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಕ್ಕೆ ಔರಾದ ಬಸ್ ಡಿಪೋ ವ್ಯವಸ್ಥಾಪಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಿವಾಜಿ ಪಾಟೀಲ್ ಗ್ರಾಪಂ ಸದಸ್ಯ ಜ್ಞಾನೋಬಾ ಕಾಳೆ, ಧನರಾಜ ಗುಡ್ಡಾ, ಗಜಾನನ ವಟಗೆ, ರಾಜಕುಮಾರ ಕೊಳಿ, ಮಾಧವ ಬಿರಾದಾರ, ರಾಮ ಬಿರಾದಾರ, ಶ್ರೀಮಂತ ವಾಡಿಕರ, ರಾಜಕುಮಾರ ಬಿರಾದಾರ, ಪಂಡರಿ ಬಿರಾದಾರ, ನಾರಾಯಣ ಬಿರಾದಾರ, ಗ್ರಾಮಸ್ಥರು, ಇದ್ದರು.

Related