ಕೊರೋನಾ ಅನುಮಾನ ಪರಿಕ್ಷೆಗೆ ರವಾನೆ

  • In State
  • April 5, 2020
  • 460 Views
ಕೊರೋನಾ ಅನುಮಾನ ಪರಿಕ್ಷೆಗೆ ರವಾನೆ

ಲಿಂಗಸುಗೂರು, ಏ. 05: ಕೊರೋನಾ ವೈರಸ್ ಶಂಕೆ ಹಿನ್ನಲೆಯಲ್ಲಿ ಲಿಂಗಸುಗೂರು ಪಟ್ಟಣದ ಇಬ್ಬರನ್ನು ಹೆಚ್ಚಿನ ಪರೀಕ್ಷೆಗಾಗಿ ರಾಯಚೂರ ಆಸ್ಪತ್ರಗೆ ಕಳಹಿಸಲಾಗಿದೆ.

ಲಿಂಗಸುಗೂರು ಪಟ್ಟಣದ ಈ ಇಬ್ಬರು ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣಪುರ ರಸ್ತೆ ಹತ್ತಿರದಲ್ಲಿ ಇರುವ ಕಾಲೋನಿಯ ನಿವಾಸಿ ಹಾಗೂ ಸ್ವಾಮಿ ವಿವೇಕಾನಂದ ನಗರದ ಯುವತಿ ಮಾರ್ಚ 24ರಂದು ಲಿಂಗಸುಗೂರು ಪಟ್ಟಣಕ್ಕೆ ಬಂದಿರುವ ಹಿನ್ನಲೆಯಲ್ಲಿ ಕೊರೋನಾ ವೈರಸ್ ಸೋಂಕು ಇರಬಹುದು ಎಂದು ಶಂಕಿಸಿ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಕಳುಹಿಸಲಾಗಿದೆ.

ಅಲ್ಲದೇ ಏಪ್ರೀಲ್3 ರಂದು ಬಾಗಲಕೋಟಿಯಲ್ಲಿ ಕೊರೊನಾ ಸೋಂಕಿನಿಂದ 77 ವರ್ಷದ ವೃದ್ದ ಮೃತಪಟ್ಟಿ ಹಿನ್ನಲೆಯಲ್ಲಿ ಬಾಗಲಕೋಟಿ ಜಿಲ್ಲಾಡಳಿತ ಮೃತ ವ್ಯಕ್ತಿಯ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದಾಗ. ನಮ್ಮ ತಂದೆ ಬೆಂಗಳೂರಿನಲ್ಲಿ ನಮ್ಮನ್ನು ಬೇಟಿ ಮಾಡಿ ಮರಳಿ ಬಾಗಲಕೋಟಿಗೆ ಬಂದಿದ್ದರು, ಲಾಕಡೌನ್ ಘೊಷಣೆಯಾದ ನಂತರ ಮಾರ್ಚ 23ರಂದು ಬೆಂಗಳೂರಿಂದ ಬಾಗಲಕೋಟಿಗೆ ತೆರಳುತ್ತಿರುವ ಸಂದರ್ಭದಲ್ಲಿ ಲಿಂಗಸುಗೂರಿನ ಸ್ನೇಹಿತರನ್ನು ಇಲಕಲ್‌ವರಿಗೆ ಕಾರಿನಲ್ಲಿ ಡ್ರಾಪ್ ಮಾಡಲಾಯಿತು ಎಂದು ಮೃತ ವೃದ್ಧನ ಮಕ್ಕಳು ಬಾಗಲಕೋಟ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಬಾಗಲಕೋಟ ಜಿಲ್ಲಾಡಳಿತ, ರಾಯಚೂರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಎಚ್ಚತ್ತಗೊಂಡ ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದ ಪರಿಣಾಮವಾಗಿ ಈ ಇಬ್ಬರನ್ನು ಹೆಚ್ಚಿನ ಪರೀಕ್ಷೆಗಾಗಿ ರಾಯಚೂರಿಗೆ ಕಳಿಸಲಾಗಿದೆ ಹಾಗೂ ಈ ಇಬ್ಬರ ಮನೆಯವರಿಗೆ ಹೋಂ ಕ್ವಾರಂಟನ್ ಮಾಡಲಾಗಿದೆ. ತಾಲೂಕ ಆಡಳಿತ ಮುಂಜಾಗೃತ ಕ್ರಮವಾಗಿ ಈ ಇಬ್ಬರು ವಾಸಿಸುವ ಪ್ರದೇಶದಲ್ಲಿ ಧ್ವನಿವರ್ಧಕದ ಮೂಲಕ ಯಾರೂ ಮನೆಯಿಂದ ಹೊರಗಡೆ ಬಾರದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಪಟ್ಟಣದ ಎರಡು ವಾರ್ಡ್ಗಳಲ್ಲಿನ ಪ್ರದೇಶದಲ್ಲಿ ಔಷಧಿ ಸಿಂಪಡಿಸಲಾಗಿದೆ. ಈ ಇಬ್ಬರು ಇಲಕಲ್‌ನಿಂದ ಲಿಂಗಸುಗೂರಿಗೆ ಯಾವ ವಾಹನದಲ್ಲಿ ಬಂದರು, ನಂತರ ಯಾರನ್ನು ಬೇಟಿಯಾದರು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಹಶೀಲ್ದಾರ ಚಾಮರಾಜ ಪಾಟೀಲ್ ತಿಳಿಸಿದ್ದಾರೆ.

ಡಿವೈಎಸ್ಪಿ ಎಸ್.ಎಸ್.ಹುಲ್ಲೂರು, ತಾಲೂಕು ಆರೋಗ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ಸಿಪಿಐ ಯಶವಂತ ಬಿಸನ್ನÀಳ್ಳಿ, ಪಿಎಸ್‌ಐ ಪ್ರಕಾಶರೆಡ್ಡಿ ಡಂಬಳ ಹಾಗೂ ಸಿಬ್ಬಂದಿವರ್ಗದವರು ಇದ್ದರು.

 

 

Related