ದೇಶದ್ರೋಹಿಗಳು ರಾತ್ರೋ ರಾತ್ರಿ ರಿಲೀಸ್..!

ದೇಶದ್ರೋಹಿಗಳು ರಾತ್ರೋ ರಾತ್ರಿ ರಿಲೀಸ್..!

ಹುಬ್ಬಳ್ಳಿ, ಫೆ. 17 : ಪಾಕ್ ಪರ ಘೋಷಣೆ ಕೂಗಿದ್ದ ಹುಬ್ಬಳ್ಳಿಯ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ರಿಲೀಸ್ ಆಗಿದ್ದಾರೆ.
ನಿನ್ನೆ ಮಧ್ಯಾಹ್ನ ಬಂಧಿಸಿದ್ದ ಪೊಲೀಸರು ರಾತ್ರಿ ಬಾಂಡ್ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗ್ತಿದೆ.
ಬೀದರ್ನ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶನ ಆರೋಪ ಮೇಲೆ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ಪ್ರಾಂಶುಪಾಲರ ದೂರಿನ ಮೇರೆಗೆ ಅರೆಸ್ಟ್ ಆಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳಾದ ಅಮೀರ್, ಬಾಸೀತ್ ಮತ್ತು ತಾಲೀಬ್ ವಿರುದ್ಧ ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆಯಲ್ಲಿ ಹಲವು ಸೆಕ್ಷನ್ ಅಡಿ ಪ್ರಕರಣಗಳು ದಾಖಲಾಗಿವೆ. Cr no 10/2020u/s124A, 153A(b), 153B(c), 505(2), r/w34 of IPC ಅಡಿ ಕೇಸ್ ದಾಖಲಾಗಿದೆ. ಆದ್ರೆ, ಸಿಆರ್ಪಿಸಿ 169 ಅಡಿ ಕೆಎಲ್ಇ ಕಾಲೇಜು ಆಡಳಿತ ಮಂಡಳಿಯಿಂದ ಬಾಂಡ್ ಬರೆಸಿಕೊಂಡ ಪೊಲೀಸರು, ರಾತ್ರಿಯೇ ವಿದ್ಯಾರ್ಥಿಗಳನ್ನ ರಿಲೀಸ್ ಮಾಡಿದ್ದಾರೆ. ದೇಶದ್ರೋಹ ಆರೋಪ ಹೊತ್ತ ವಿದ್ಯಾರ್ಥಿಗಳನ್ನ ಬಿಡುಗಡೆ ಮಾಡಿರುವ ಪೊಲೀಸರ ನಡೆಗೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

Related