ಟ್ರಾಫಿಕ್ ಜಾಮ್ ನಿಂದ ಜನ ಹೈರಾಣ

ಟ್ರಾಫಿಕ್ ಜಾಮ್ ನಿಂದ ಜನ ಹೈರಾಣ

ಬೆಂಗಳೂರು: ಇಂದಿರಾನಗರ ಮುಖ್ಯ ರಸ್ತೆಯಿಂದ ಹಳೆ ಮದ್ರಸ್ ರಸ್ತೆಗೆ ಸಂಪರ್ಕಿಸಿದ ನಂತರ ಪ್ರಾರಂಭವಾದ ಟ್ರಾಫಿಕ್ ಜಾಮ್ ಸುಮಾರು 2 ಕೀ.ಮೀ ವರಗೆ ಟ್ರಾಫಿಕ್ ಜಾಮ್ ನಿಂದ ಜನ ಹೈರಾಣಗಿದ್ದಾರೆ.

ವಿವೇಕಾನಂದ ಮೇಟ್ರೊ ಸ್ಟೇಷನ್, ಗೋಪಾಲನ್ ಮಾಲ್ ಕೆ.ರ್.ಪುರಂ ರೈಲ್ವೇ ಸ್ಟೇಷನ್ ಹತ್ತಿರ ವಿಪರೀತವಾದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ.

ದಿನನಿತ್ಯ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ದ್ವಿಚಕ್ರ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್ ನ ಗೋಳು ಕೇಳುವವರಿಲ್ಲದಂತಾಗಿದೆ. ಟ್ರಾಫಿಕ್ ಪೋಲಿಸರು ಇದ್ದರು ವಾಹನಗಳ ದಟ್ಟಣೆಯನ್ನು ನಿರ್ವಹಿಸಲು ಹರಸಹಾಸ ಪಡುವಂತಾಗಿದೆ.

ಟ್ರಾಫಿಕ್ ಸಮಸ್ಯೆಯಂದ ವಾಹನಗಳು ಹೊರಸೂಸುವ ವಿಷ ಅನಿಲ ಗಾಳಿಯಲ್ಲಿ ಸೇರಿ ಮಾಲಿನ್ಯ ಗೊಳಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆಗಳು ಕಾಡತೋಡಗಿವೆ.

ಈ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನಿಯೋಜನೆಗೊಳಿಸಿ. ಟ್ರಾಫಿಕ್ ನಿವಾರಣೆ ಮಾಡುವುದರ ಜೊತೆಗೆ ಮಾಲಿನ್ಯ ತಡೆಗಟ್ಟಿ ಸಾರ್ವಜನಿಕರ ಆರೋಗ್ಯವನ್ನು ನಿವಾರಿಸಿದಂತಾಗುತ್ತದೆ. ಈ ಕೂಡಲೇ ಸಂಬಂಧಪಟ್ಟ ಜನ ಪ್ರತಿನಿಧಿಗಳು ಟ್ರಾಫಿಕ್ ಅಧಿಕಾರಿಗಳು. ತ್ವರಿತವಾಗಿ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡುತಿದ್ದಾರೆ

ವರದಿಗಾರರು-ಸ್ವಾಮಿ ಕಾರಿಗನೂರು

Related