ನಾಳೆ ವರ್ಷದ ಕೊನೆಯ ಚಂದ್ರ ಗ್ರಹಣ

ನಾಳೆ ವರ್ಷದ ಕೊನೆಯ ಚಂದ್ರ ಗ್ರಹಣ

ಬೆಂಗಳೂರು: 2023ನೆಯ ಸಾಲಿನ ಕೊನೆಯ ಚಂದ್ರ ಗ್ರಹಣ ನಾಳೆ ನಡೆಯಲಿದ್ದು ಇದರ ಎಫೆಕ್ಟ್ ಸಿಲಿಕಾನ್ ಸಿಟಿ ಮಂದಿಗೂ ತಟ್ಟಲಿದೆ.

ವರ್ಷದ ಕೊನೆಯ ಚಂದ್ರಗ್ರಹಣ ಅಕ್ಟೋಬರ್ 28-29 ರ ಮಧ್ಯರಾತ್ರಿ ಸಂಭವಿಸಲಿದೆ. ಭಾರತದ ಎಲ್ಲಾ ಸ್ಥಳಗಳಲ್ಲಿ ಗ್ರಹಣ ಗೋಚರಿಸುತ್ತಿದೆ. ಇದು ಭಾಗಶಃ ಚಂದ್ರಗ್ರಹಣವಾಗಿದೆ. ನಾಳೆ ರಾತ್ರಿ 11:30 ರಿಂದ ರಾತ್ರಿ ಮಧ್ಯರಾತ್ರಿ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಬರಿಗಣ್ಣಿನಿಂದ ಚಂದ್ರಗ್ರಹಣ ವೀಕ್ಷಣೆ ಮಾಡಬಹುದು. ಅದರಿಂದ ಯಾವುದೇ ಹಾನಿಯಿಲ್ಲ.

ಇನ್ನು ಈ ವರ್ಷದ ಕೊನೆಯ ಗ್ರಹಣ ನಾಳೆ ರಾತ್ರಿ ನಡೆಯಲಿದ್ದು, ಸಿಲಿಕಾನ್ ಸಿಟಿ ದೇವಸ್ಥಾನಗಳಿಗೂ ಗ್ರಹಣದ ಎಫೆಕ್ಟ್ ತಟ್ಟಿದ್ದು, ನಾಳೆ ಬೆಂಗಳೂರಿನ ದೇವಸ್ಥಾನಗಳ ದರ್ಶನದ ಸಮಯದಲ್ಲಿ ವ್ಯತ್ಯಯವಾಗಿದೆ. ನಾಳೆ ಸಂಜೆ 6ಕ್ಕೆ ಕಾಡು ಮಲ್ಲೇಶ್ವರಂ ದೇವರ​​ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಭಾನುವಾರ ಸಂಜೆ ಕಾಡು ಮಲ್ಲೇಶ್ವರಂ ದೇವರ ದರ್ಶನಕ್ಕೆ ಅವಕಾಶ​​ ಕಲ್ಪಿಸಲಾಗಿದೆ.

ಅದೇ ರೀತಿಯಾಗಿ ನಾಳೆ ಮಧ್ಯಾಹ್ನ 2ಗಂಟೆಗೆ ಬನಶಂಕರಿ ದೇವರ ದರ್ಶನಕ್ಕೆ ನಿರ್ಬಂಧಿಸಿದ್ದು, ಭಾನುವಾರ ಬೆಳಗ್ಗೆ 5 ಗಂಟೆಗೆ ಮತ್ತು ಸಂಜೆ 4ಗಂಟೆಗೆ ಮತ್ತೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯಿಂದ ಮಾಹಿತಿ ನೀಡಲಾಗಿದೆ.

 

Related