ಟಾಲಿವುಡ್ ನಿರ್ಮಾಪಕನಿಗೆ ಯೆಸ್! ಅಂದ ಶಿವಣ್ಣ

ಟಾಲಿವುಡ್ ನಿರ್ಮಾಪಕನಿಗೆ ಯೆಸ್! ಅಂದ ಶಿವಣ್ಣ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಟಾಲಿವುಡ್ ನಿರ್ಮಾಪಕರ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ಗಾಂಧಿನಗರದ ಅಡ್ಡದಲ್ಲಿ ಕೇಳಿ ಬರುತ್ತಿತ್ತು. ಆದರೆ ಶಿವಣ್ಣ ಕಡೆಯಿಂದ ಯಾವುದೇ ಅಪ್‍ಡೇಟ್ ಕೇಳಿ ಬಂದಿಲ್ಲ. ಆದರೆ ಇದೀಗ ಕರುನಾಡ ಚಕ್ರವರ್ತಿ ಅಭಿನಯಿಸಲಿರುವ ಆ ಚಿತ್ರದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಹೌದು, ಟಾಲಿವುಡ್ ಕಾರ್ಯಕಾರಿ ನಿರ್ಮಾಪಕ, ಚಿತ್ರಕಥೆ, ಸಂಭಾಷಣೆಗಾರ ರಾಮ್‍ಧುಲಿಪುಡಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಈ ಚಿತ್ರದಲ್ಲಿ ಶಿವಣ್ಣ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಭಾವನಾತ್ಮಕ ಕಥೆಯೊಂದಿಗೆ ಪ್ರೀತಿಗೆ ಹೊಸ ಅರ್ಥ ನೀಡುವ ಕಥಾಹಂದರ ಚಿತ್ರದಲ್ಲಿರಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಶಿವಮೊಗ್ಗ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ನಾನಾ ಕಡೆ ಚಿತ್ರೀಕರಿಸಲು ನಿರ್ದೇಶಕರು ಪ್ಲಾನ್ ಮಾಡಿಕೊಂಡಿದ್ದಾರೆ.

Related